Bangalore, ಮಾರ್ಚ್ 12 -- OTT Top 10 Movies: ಈ ವಾರ ಒಟಿಟಿಯಲ್ಲಿ ಹಲವು ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಮಮ್ಮುಟ್ಟಿಯ ಹಳೆ ಜಮಾನದ ಎಐ ರೂಪವನ್ನು ತೋರಿಸಿದ ರೇಖಾಚಿತ್ರಂನಿಂದ ಕನ್ನಡದ ಗಣವರೆಗೆ ಹಲವು ಸಿನಿಮಾಗಳು ಒಟಿಟಿ ಪ್ಲೇನ ಜಿಯೋಹಾಟ್‌ಸ್ಟಾರ್‌, ಸನ್‌ನೆಕ್ಸ್ಟ್‌, ಸೋನಿಲಿವ್‌ ಮುಂತಾದ ಒಟಿಟಿಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ. ಇಂತಹ ಒಟಿಟಿಗಳಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಹತ್ತು ಸಿನಿಮಾಗಳು ಯಾವುವು ಎಂದು ನೋಡೋಣ.

ರೇಖಾಚಿತ್ರಂ: ಮಲಯಾಳಂ ಮಿಸ್ಟರಿ ಕ್ರೈಮ್ ಥ್ರಿಲ್ಲರ್ ರೇಖಾಚಿತ್ರಂ ಸಿನಿಮಾ ಮಾರ್ಚ್ 6ರಂದು ಸೋನಿ ಲೈವ್ ಒಟಿಟಿಗೆ ಬಂದಿದೆ. ಈ ಚಿತ್ರ ಈಗ ಒಟಿಟಿ ಪ್ಲೇನಲ್ಲಿ ಟ್ರೆಂಡಿಂಗ್‌ನಲ್ಲಿ ನಂಬರ್‌ಒನ್‌ ಸ್ಥಾನದಲ್ಲಿದೆ. ಮೂಲ ಮಲಯಾಳಂ ಜತೆಗೆ ತೆಲುಗು, ಹಿಂದಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾದದ ಈ ಸಿನಿಮಾದಲ್ಲಿ ಎಐ ಮೂಲಕ ಯಂಗ್‌ ಮಮ್ಮುಟ್ಟಿಯನ್ನು ತೋರಿಸಲಾಗಿದೆ.

ಕುಡುಂಬಸ್ಥಾನ್: ಇದು ತಮಿಳು ಕಾಮಿಡಿ ಸಿನಿಮಾ. ರಾಜೇಶ್ವರ್ ಕಾಳಿಸಾಮಿ ಅವರ ಚೊಚ್ಚಲ ನಿರ್ದೇಶನದ ಚಿತ್ರ. ಸಿನಿಮಾಕಾರ...