ಭಾರತ, ಮಾರ್ಚ್ 19 -- OTT Space Movies: ಅಂತರಿಕ್ಷದಲ್ಲಿ ಒಂಬತ್ತು ತಿಂಗಳ ಕಾಲ ಕಳೆದ ಸುನೀತಾ ವಿಲಿಯಮ್ಸ್‌ ಭೂಮಿಗೆ ವಾಪಸ್‌ ಬಂದಿದ್ದಾರೆ. ಇದು ಸಾಕಷ್ಟು ಜನರಿಗೆ ಖುಷಿ ನೀಡಿದೆ. ಇಂತಹ ಸಾಹಸ ಮಾಡಿದ ಇವರು ಜಾಗತಿಕ ಐಕಾನ್‌ ಆಗಿದ್ದಾರೆ. ಭೂಮಿಯಿಂದ ಅತ್ಯಂತ ದೂರದಲ್ಲಿ ತೇಲುವ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆಯುವುದು ಸುಲಭದ ಮಾತಲ್ಲ. ಇದೇ ಸಿನಿಮಾದಲ್ಲಿ ಒಟಿಟಿ ಸಿನಿಮಾ ಪ್ರೇಮಿಗಳು ಅಂತರಿಕ್ಷಕ್ಕೆ ಸಂಬಂಧಪಟ್ಟ ಸಿನಿಮಾಗಳನ್ನು ನೋಡಿ ಥ್ರಿಲ್ಲಾಗಬಹುದು. ಈಗಾಗಲೇ ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌ ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಸೈನ್ಸ್‌ ಫಿಕ್ಷನ್‌, ಸ್ಪೇಸ್‌ ಸಿನಿಮಾಗಳ ಸಾಕಷ್ಟು ಇವೆ. ಕೆಲವೊಂದು ಸಿನಿಮಾಗಳು ಕಪೋಲಕಲ್ಪಿತವಾಗಿದ್ದರೆ, ‌ಇನ್ನು ಕೆಲವು ಸಿನಿಮಾಗಳ ಗಗನಯಾನಿಗಳ ಬದುಕಿಗೆ ಹತ್ತಿರವಾಗಿದೆ. ಇಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿರುವ ಕೆಲವು ಸ್ಪೇಸ್‌ ಸಿನಿಮಾಗಳ ವಿವರ ನೀಡಲಾಗಿದೆ.

ಜರೋಸ್ಲಾವ್ ಕಲ್ಫಾರ್ ಅವರ 2017 ರ ಕಾದಂಬರಿ ಸ್ಪೇಸ್‌ಮ್ಯಾನ್ ಆಫ್ ಬೊಹೆಮಿಯಾವನ್ನು ಆಧರಿಸಿದ ಸಿನಿಮಾ ಇದಾಗಿದೆ. ...