Bangalore, ಮಾರ್ಚ್ 17 -- Kaadhal Enbadhu Podhu Udamai OTT Release: ಭಾರತದಲ್ಲಿ ಸಲಿಂಗ ವಿವಾಹ, ಲೆಸ್ಬಿಯನ್‌ ಪ್ರೇಮ, ಎಲ್‌ಜಿಬಿಟಿಕ್ಯು ಸಮುದಾಯದ ಕಥೆಗಳು ಇರುವ ಸಿನಿಮಾಗಳು ಆಗೊಂದು ಹೀಗೊಂದು ಬರುತ್ತಿವೆ. ಯಾವುದೇ ಪ್ರಕಾರದ ಕಥೆಯಾಗಿರಲಿ ಪರಿಕಲ್ಪನೆ ಹೊಸದಾಗಿದ್ದರೆ ಪ್ರೇಕ್ಷಕರು ಅದನ್ನು ಸ್ವೀಕರಿಸುತ್ತಾರೆ. ಆದಾಗ್ಯೂ, ಕೆಲವೊಮ್ಮೆ ದಿಟ್ಟ ವಿಷಯ ಹೊಂದಿರುವ ಚಲನಚಿತ್ರಗಳು ವಿವಾದವನ್ನು ಎದುರಿಸುತ್ತವೆ. ವಿಶೇಷವಾಗಿ ಲೆಸ್ಬಿಯನ್‌ ಕಥೆಗಳು ಇರುವ ಸಿನಿಮಾಗಳ ಕುರಿತು ವಿವಾದಗಳು ಉಂಟಾಗುತ್ತವೆ. ಒಂದಿಷ್ಟು ಮಂದಿ ಪ್ರೇಕ್ಷಕರು ಇಂತಹ ವಿಷಯಗಳ ಕುರಿತಾದ ಸಿನಿಮಾಗಳ ಕುರಿತು ತಮ್ಮ ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಇದೇ ರೀತಿಯ ವಿವಾದವನ್ನು ತಮಿಳು ಚಿತ್ರ ಕಾದಲ್ ಎನ್ಬದು ಪೋದು ಉಡಮೈ ಕೂಡ ಎದುರಿಸಿದೆ. ಕಾದಲ್ ಎಂಬದು ಪೋದು ಉಡಮೈ ಎಂಬ ತಮಿಳು ಪ್ರಣಯ ಸಿನಿಮಾ. ಇಬ್ಬರು ಹುಡುಗಿಯರು ಪ್ರೀತಿಯಲ್ಲಿ ಬೀಳುವ ದಿಟ್ಟ ಪರಿಕಲ್ಪನೆ ಹೊಂದಿದೆ. ಈಗ ಗಂಡು ಗಂಡಿನ ಸಲಿಂಗಕಾಮ, ಹೆಣ್ಣು ಹೆಣ್ಣಿನ ಲೆಸ್ಪೆಯನ್‌ ಲವ್‌ನ ಸುದ್ದಿಗಳು ಕಾಣ...