ಭಾರತ, ಫೆಬ್ರವರಿ 21 -- ಫೆಬ್ರುವರಿ ಕೊನೆ ವಾರದಲ್ಲಿ ಮನೆಯಲ್ಲೇ ಕೂತು ಸಿನಿಮಾ ನೋಡುವ ಆಸೆ ಇರುವವರಿಗೆ ಬಂಪರ್ ಆಯ್ಕೆಗಳಿವೆ. ಈ ವಾರ ನೆಟ್‌ಫ್ಲಿಕ್‌, ಜೀ 5, ಜಿಯೋ ಹಾಟ್‌ಸ್ಟಾರ್‌ನಲ್ಲಿ ಹಲವು ವೆಬ್‌ ಸಿರೀಸ್ ಹಾಗೂ ಸಿನಿಮಾಳು ಬಿಡುಗಡೆಯಾಗುತ್ತಿವೆ. ತೆಲುಗಿನ ಡಾಕು ಮಹಾರಾಜ್ ಸಿನಿಮಾ ಸೇರಿದಂತೆ ಕ್ರೈಮ್‌ ಬೀಟ್ ವೆಬ್‌ಸರಣಿವರೆಗೆ ಯಾವೆಲ್ಲಾ ಸಿನಿಮಾ, ವೆಬ್‌ಸರಣಿಗಳು ಯಾವ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿವೆ ಎಂಬ ವಿವರ ಇಲ್ಲಿದೆ.

ಕ್ರೈಮ್ ಬೀಟ್ ವೆಬ್ ಸರಣಿಯು ಈ ಶುಕ್ರವಾರ (ಫೆಬ್ರವರಿ 21) Zee5 OTT ಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸರಣಿಯು ಕ್ರೈ ರಿಪೋರ್ಟರ್‌ ಒಬ್ಬ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಗ್ಗೆ ಸತ್ಯವನ್ನು ಬಯಲು ಮಾಡಲು ಪ್ರಯತ್ನಗಳ ಸುತ್ತ ಸುತ್ತುತ್ತದೆ. ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ ಪತ್ರಕರ್ತ ಮುಂದುವರಿಯುತ್ತಲೇ ಇರುತ್ತಾನೆ. ಈ ಕ್ರೈಮ್ ಥ್ರಿಲ್ಲರ್ ಸರಣಿಯಲ್ಲಿ ಶಕೀಬ್ ಸಲೀಮ್, ಸಬಾ ಆಜಾದ್ ಮತ್ತು ರಾಹುಲ್ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಜೀವ್ ಕೌಲ್ ನಿರ್ದೇಶನ ಮ...