Bangalore, ಏಪ್ರಿಲ್ 9 -- OTT releases this week: ಒಟಿಟಿಯಲ್ಲಿ ಹೊಸ ಸಿನಿಮಾ, ವೆಬ್‌ಸರಣಿಗಳು ಬಿಡುಗಡೆಯಾಗಲು ಸಾಕಷ್ಟು ಜನರು ಚಾತಕಪಕ್ಷಿಯಂತೆ ಕಾಯುತ್ತಿರಬಹುದು. ಛಾವಾ, ಪ್ರವಿಂಕೂಡು ಶಪ್ಪು, ಹ್ಯಾಕ್ಸ್ ಸೀಸನ್ 4 ಸೇರಿದಂತೆ ಹಲವು ಬ್ಲಾಕ್‌ಬಸ್ಟರ್‌, ಸೂಪರ್‌ಹಿಟ್‌ ಚಿತ್ರಗಳು ಮುಂಬರುವ ದಿನಗಳಲ್ಲಿ ಒಟಿಟಿಗಳಲ್ಲಿ ಬಿಡುಗಡೆಯಾಗಲಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಸೋನಿಲಿವ್‌, ಜೀ5, ಯೋಹಾಟ್‌ಸ್ಟಾರ್ ಮತ್ತು ಇತರೆ ಒಟಿಟಿಗಳಲ್ಲಿ ಬಿಡುಗಡೆಯಾಗಲಿವೆ ಆಕ್ಷನ್-ಡ್ರಾಮಾ, ಮಿಸ್ಟರಿ-ಥ್ರಿಲ್ಲರ್, ಹಾರರ್, ವೈಜ್ಞಾನಿಕ ಕಾದಂಬರಿ ನಾಟಕ, ಅಲೌಕಿಕ ನಾಟಕ, ಐತಿಹಾಸಿಕ ಮಹಾಕಾವ್ಯ ಸೇರಿದಂತೆ ವಿವಿಧ ಪ್ರಕಾರಗಳನ್ನು ಒಳಗೊಂಡ ಸಿನಿಮಾಗಳು, ವೆಬ್‌ಸರಣಿಗಳು ಬಿಡುಗಡೆಯಾಗಲಿವೆ.

ಒಟಿಟಿ ಬಿಡುಗಡೆ ದಿನಾಂಕ: ಏಪ್ರಿಲ್ 11

ಒಟಿಟಿ ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

ಲಕ್ಷ್ಮಣ್ ಉಟೇಕರ್ ನಿರ್ದೇಶನದ ಐತಿಹಾಸಿಕ ಡ್ರಾಮಾ ಇದಾಗಿದೆ. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ನಟಿಸಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಮರಾಠಾ ರಾಜ ಛ...