ಬೆಂಗಳೂರು, ಮಾರ್ಚ್ 15 -- OTT movies release this week Tamil: ಈ ವಾರ ಒಟಿಟಿಗೆ ಕನ್ನಡ, ಮಲಯಾಳಂ ಮಾತ್ರವಲ್ಲದೆ ಹಲವು ತಮಿಳು ಸಿನಿಮಾಗಳೂ ಬಂದಿವೆ. ರೊಮ್ಯಾಂಟಿಕ್‌, ಹಾರರ್‌, ಕಾಮಿಡಿ ಜಾನರ್‌ಗಳಲ್ಲಿ ಬಂದ ಆ ಕಾಲಿವುಡ್‌ ಸಿನಿಮಾಗಳ ವಿವರ ಇಲ್ಲಿದೆ. ಇವುಗಳಲ್ಲಿ ಎರಡು ಮಿಸ್‌ ಮಾಡದೆ ನೋಡುವಂತೆ ಇದೆ. ತಮಿಳು ಸಿನಿಮಾಸಕ್ತರು ಈ ಸಿನಿಮಾಗಳನ್ನು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸಬಹುದು.

ಕಾಲಿವುಡ್ ಹಾಸ್ಯನಟ ತಂಬಿರಾಮಯ್ಯ ನಿರ್ದೇಶನದ "ರಾಜಕಿಲಿ" ಟೆಂಟ್ ಕೋಟಾ (Tentkotta) ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಡ್ರಾಮಾ ಥ್ರಿಲ್ಲರ್ ನಲ್ಲಿ ಸಮುದ್ರ ಖಾನಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜಾ ಕಿಲಿ ಉತ್ತಮ ಸಂದೇಶ ಆಧಾರಿತ ಚಿತ್ರವಾಗಿ ಪ್ರೇಕ್ಷಕರನ್ನು ಆಕರ್ಷಿಸಿದೆ.

ಪ್ರೇಮ ದೇಶಂ ಖ್ಯಾತಿಯ ವಿನೀತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಕಾದಲ್ ಎನ್ಭಾಡು ಪೊಡು ಉದಯಂ ಟೆಂಟ್ ಕೋಟಾ ಒಟಿಟಿಗೆ ಬಂದಿದೆ. ನಿರ್ದೇಶಕ ಜಯಪ್ರಕಾಶ್ ರಾಧಾಕೃಷ್ಣನ್ ಈ ಚಿತ್ರದಲ್ಲಿ ಆಧುನಿಕ ಸಂಬಂಧಗಳು ಹೇಗೆ ಬೋಲ್ಡ್ ರೀತಿಯಲ್ಲಿ ಇವ...