ಭಾರತ, ಏಪ್ರಿಲ್ 7 -- ಪ್ರತಿ ವಾರ ಚಿತ್ರಮಂದಿರಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಚಲನಚಿತ್ರಗಳು ಮತ್ತು ವೆಬ್‌ ಸರಣಿಗಳ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಾರೆ. ಏಪ್ರಿಲ್ ತಿಂಗಳ ಎರಡನೇ ವಾರ ಸಿನಿ ಪ್ರೇಕ್ಷಕರಿಗೆ ಸಾಕಷ್ಟು ಮನೋರಂಜನೆ ನೀಡಲು ಸಿನಿಮಾ, ವೆಬ್‌ಸರಣಿಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಈ ವಾರ ಯಾವೆಲ್ಲಾ ವೆಬ್‌ಸರಣಿ, ಸಿನಿಮಾಗಳು ಬಿಡುಗಡೆಯಾಗಲಿವೆ ನೋಡಿ.

ಪ್ರಸಿದ್ಧ ವಿಡಿಯೊ ಗೇಮ್ ಅನ್ನು ಆಧರಿಸಿದ ಸರಣಿಯ ಎರಡನೇ ಸೀಸನ್ ಆಗಿದೆ. ಲಾಸ್ಟ್ ಆಫ್ ಅಸ್ 2 ಸರಣಿಯು ಏಪ್ರಿಲ್ 13, 2025 ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.

ಪೈಂಕಿಲಿ ಮಲಯಾಳಂ ಸಿನಿಮಾ, ಪ್ರೇಮಕಥೆಯನ್ನು ಆಧರಿಸಿದೆ. ಇದರಲ್ಲಿ ನಗು ಹಾಗೂ ಪ್ರೀತಿಯ ಮಿಶ್ರಣವಿದೆ ಎನ್ನಬಹುದು. ಈ ಸಿನಿಮಾವು ಏಪ್ರಿಲ್ 11 ರಂದು ಒಟಿಟಿ ಪ್ಲಾಟ್‌ಫಾರ್ಮ್ ಮನೋರಮಾ ಮ್ಯಾಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಕಿಂಗಸ್ಟನ್‌ 1982ರಲ್ಲಿ ನಡೆದ ನಿಗೂಢ ಘಟನೆಯನ್ನು ಆಧರಿಸಿದ ತಮಿಳು ಚಿತ್ರ. ಇದು ಏಪ್ರಿಲ್ 13 ಜೀ5ನಲ್ಲಿ ಬಿಡುಗಡ...