ಭಾರತ, ಮೇ 16 -- House of the Dragon Season 2: ರಕ್ತಪಾತ ಪ್ರಾರಂಭವಾಗಲು ಸಜ್ಜಾಗಿದೆ! ಜಿಯೊಸಿನಿಮಾ ತನ್ನ ಜಾಗತಿಕ HBO ಸೀರೀಸ್ ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ಅಧಿಕೃತ ಟ್ರೈಲರ್ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಜಿಯೊಸಿನಿಮಾ ಪ್ರೀಮಿಯಂನಲ್ಲಿ ವಿಶೇಷವಾಗಿ ಪ್ರಸಾರವಾಗುವ ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಜೂನ್ 17ರಿಂದ ಲಭ್ಯವಿರುತ್ತಿದ್ದು ಪ್ರತಿ ಸೋಮವಾರ ಯು.ಎಸ್. ಸೇರಿದಂತೆ ಎಲ್ಲ ಕಡೆ ಏಪಿಸೋಡ್‌ಗಳು ಪ್ರಸಾರವಾಗಲಿವೆ.

ಜಾರ್ಜ್ ಆರ್.ಆರ್. ಮಾರ್ಟಿನ್ ಅವರ ಫೈರ್ ಅಂಡ್ ಬ್ಲಡ್ ಆಧರಿಸಿದ ಈ ಸರಣಿಯು ಹೌಸ್ ಟಾರ್ಗೇರಿಯನ್ ಕಥೆಯನ್ನು ತೆರೆದಿಡಲಿದೆ. ರಾಜ ಕುಟುಂಬದ ಕಥೆಯಲ್ಲಿ ಅಧಿಕಾರದ ಸಂಘರ್ಷಗಳ ಬಳಿಕ ಕುಟುಂಬವು ಹೇಗೆ ರಾಜಕೀಯ ಒಳಸಂಚು, ಕೌಟುಂಬಿಕ ಶತ್ರುತ್ವಗಳನ್ನು ಎದುರಿಸಿ ಮುನ್ನಡೆಯುತ್ತದೆ ಮತ್ತು ಸಿಂಹಾಸನವನ್ನು ಮರಳಿ ಪಡೆಯಲು ಹೇಗೆ ಯುದ್ಧಕ್ಕಿಳಿಯುತ್ತದೆ ಎಂಬುದೇ ಈ ಸಿರೀಸ್‌ನ ಎಳೆ.

ಇದನ್ನೂ ಓದಿ: ಅವ್ರಿಗೊಂದ...