ಭಾರತ, ಮಾರ್ಚ್ 12 -- Mufasa The lion King OTT Release: ಹಾಲಿವುಡ್‌ನಲ್ಲಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಧೂಳೆಬ್ಬಿಸಿದ್ದ ಕಳೆದ ವರ್ಷ ತೆರೆಕಂಡ ಆನಿಮೇಷನ್‌ ಸಿನಿಮಾವೊಂದು ಇದೀಗ ಒಟಿಟಿಗೆ ಬರಲು ಅಣಿಯಾಗಿದೆ. ಆ ಸಿನಿಮಾ ಬೇರಾವುದೂ ಅಲ್ಲ, ಮುಫಾಸಾ ದಿ ಲಯನ್‌ ಕಿಂಗ್‌ ಸಿನಿಮಾ. ಮುಫಾಸಾ ಚಿತ್ರ ಭಾರತೀಯ ಪ್ರೇಕ್ಷಕರಿಂದಲೂ ದೊಡ್ಡ ಮಟ್ಟದ ಮೆಚ್ಚುಗೆ ಪಡೆದುಕೊಂಡಿದೆ. ಅದಕ್ಕೂ ಮೊದಲು ಬಂದ ದಿ ಲಯನ್‌ ಕಿಂಗ್‌ ಸಿನಿಮಾ ಸಹ ಮೋಡಿ ಮಾಡಿತ್ತು. ಇದೀಗ ಕಳೆದ ವರ್ಷದ ಡಿಸೆಂಬರ್‌ 24ರಂದು ತೆರೆಕಂಡಿದ್ದ ಮುಫಾಸಾ ದಿ ಲಯನ್‌ ಕಿಂಗ್‌ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದೆ.

ಕಳೆದ ವರ್ಷದ ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರದ ಹಿಂದಿ ಆವೃತ್ತಿಗೆ ಶಾರುಖ್ ಖಾನ್, ಅಬ್ರಾಮ್ ಖಾನ್, ಆರ್ಯನ್ ಖಾನ್, ಶ್ರೇಯಸ್ ತಲ್ಪಡೆ ಮತ್ತು ಸಂಜಯ್ ಮಿಶ್ರಾ ಧ್ವನಿ ನೀಡಿದ್ದಾರೆ. ಮುಫಾಸಾ ಪಾತ್ರದಲ್ಲಿ ಶಾರುಖ್ ಖಾನ್, ಸಿಂಬಾ ಪಾತ್ರದಲ್ಲಿ ಆರ್ಯನ್ ಖಾನ್, ಯಂಗ್ ಮುಫಾಸಾ ಪಾತ್ರದಲ...