Bangalore, ಮಾರ್ಚ್ 25 -- Rashmika Mandanna OTT Movies: ಸಿಕಂದರ್‌ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಜತೆ ರಶ್ಮಿಕಾ ಮಂದಣ್ಣ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಅಭಿಮಾನಿಗಳು ಒಟಿಟಿಯಲ್ಲಿರುವ ರಶ್ಮಿಕಾ ಮಂದಣ್ಣ ಅವರ ಇನ್ನಿತರ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬಹುದು. ರಶ್ಮಿಕಾ ಮಂದಣ್ಣ ಅಂದಾಗ ಕನ್ನಡಿಗರಿಗೆ ಹಲವು ಭಾವ. ಕೊಡಗಿನ ಹುಡುಗಿಯೊಬ್ಬಳು ಈಗ ದೇಶ ವಿದೇಶಗಳಲ್ಲಿ ಮನೆಮಾತಾಗಿರುವ ವಿಷಯ ಖುಷಿ ತರುತ್ತದೆ. ಇದೇ ಸಮಯದಲ್ಲಿ ಈಕೆ ಸವಾಲುಗಳನ್ನೇ ಮೆಟ್ಟಿಲಾಗಿಸಿ ಸಾಗಿದ ಪರಿಯೂ ಬೆರಗು ಮೂಡಿಸುತ್ತದೆ. ಭಾರತದ ಯಶಸ್ವಿ ನಟಿಯರಲ್ಲಿ ಒಬ್ಬರಾದ ರಶ್ಮಿಕಾ ಮಂದಣ್ಣರ ಖ್ಯಾತಿ ಪುಷ್ಪ ಸಿನಿಮಾದ ಬಳಿಕ ಮುಗಿಲೆತ್ತರಕ್ಕೆ ಬೆಳೆದಿದೆ. ಅನಿಮಲ್‌ ಸಿನಿಮಾದಲ್ಲಿ ಈಕೆ ನಟಿಸಿದ ಬಳಿಕ ಬಾಲಿವುಡ್‌ನಲ್ಲಿಯೂ ಈಕೆಯ ಕ್ರೇಜ್‌ ಹೆಚ್ಚಾಗಿದೆ. ಬನ್ನಿ ಒಟಿಟಿಯಲ್ಲಿ ನೋಡಬಹುದಾದ ರಶ್ಮಿಕಾ ಮಂದಣ್ಣರ ಸಿನಿಮಾಗಳನ್ನು ನೋಡೋಣ.

ಕಿರಿಕ್‌ ಪಾರ್ಟಿ (ಜಿಯೋಹಾಟ್‌ಸ್ಟಾರ್‌): ರಶ್ಮಿಕಾ ಮಂದಣ್ಣ ಎಂದಾಗ ಕನ್ನಡಿಗರಿಗೆ ಮೊದಲು...