ಭಾರತ, ಫೆಬ್ರವರಿ 28 -- ಒಟಿಟಿ ವೇದಿಕೆಗಳು ಆರಂಭವಾದ ಬಳಿಕ ಮನೆಯಲ್ಲೇ ಕೂತು ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್‌ ಕಾಲದಲ್ಲಿ ಜನಪ್ರಿಯತೆ ಗಳಿಸಿದ ಒಟಿಟಿ ವೇದಿಕೆಯೂ ನಂತರ ತನ್ನ ಜನಪ್ರಿಯತೆಯನ್ನು ಇನ್ನಷ್ಟು ವಿಸ್ತರಿಸಿತ್ತು. ಇತ್ತೀಚಿನ ದಿನಗಳಲ್ಲಿ ಕೆಲವು ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಒಟಿಟಿಯಲ್ಲಿರುವ ವಿವಿಧ ಭಾಷೆಗಳ ಕ್ರೈಮ್ ಥ್ರಿಲ್ಲರ್‌ ಸಿನಿಮಾಗಳ ಸಿನಿಮಾಗಳ ಪಟ್ಟಿ ಇಲ್ಲಿದೆ.

ಮಲಯಾಳಂ ಚಲನಚಿತ್ರಗಳಿಗೆ ಬೇಡಿಕೆ ಹೆಚ್ಚುಆ್ಯಕ್ಷನ್‌, ಕ್ರೈಂ, ಥ್ರಿಲ್ಲರ್ ಸಿನಿಮಾಗಳು ಎಂದಾಗ ನೆನಪಿಗೆ ಬರುವುದು ಮಲಯಾಳಂ ಸಿನಿಮಾಗಳು. ಮಲಯಾಳಂನಲ್ಲಿ ಆ ಮಟ್ಟದಲ್ಲಿ ಕ್ರೈಂ ಥ್ರಿಲ್ಲರ್‌, ಸಸ್ಪೆನ್ಸ್‌ ಥ್ರಿಲ್ಲರ್‌ ಮತ್ತು ಹಾರರ್ ಥ್ರಿಲ್ಲರ್‌ಗಳಂತಹ ಸಿನಿಮಾಗಳು ಸಾಕಷ್ಟು ಬಿಡುಗಡೆಯಾಗುತ್ತವೆ. ಇದಲ್ಲದೆ ಮಲಯಾಳಂನ ಟಾಪ್ ಹೀರೋಗಳು ಕೂಡ ವಿಭಿನ್ನ ಕಥೆಗಳನ್ನು ಆರಿಸಿಕೊಂಡು ನಟಿಸುತ್ತಿದ್ದಾರೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ನಂತಹ ಅನೇಕ ಒಟಿಟಿ ಪ್ಲಾಟ್‌ಫಾರ್...