Bengaluru, ಮಾರ್ಚ್ 9 -- ಒಟಿಟಿಯಲ್ಲಿ ಈ ವಾರದಿಂದ ಸ್ಟ್ರೀಮಿಂಗ್‌ ಆರಂಭಿಸಿರುವ ಈ ಐದು ಸಿನಿಮಾಗಳು, ಆಯಾ ಒಟಿಟಿ ವೇದಿಕೆಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ. ಹೀಗಿವೆ ಆ ಸಿನಿಮಾಗಳ ಕುರಿತ ಮಾಹಿತಿ.

ರೇಖಾಚಿತ್ರಂ: ಮಲಯಾಳಂ ಮಿಸ್ಟರಿ ಕ್ರೈಮ್ ಥ್ರಿಲ್ಲರ್ ರೇಖಾಚಿತ್ರಂ ಸಿನಿಮಾ ಮಾರ್ಚ್ 6ರಂದು ಸೋನಿ ಲೈವ್ ಒಟಿಟಿಗೆ ಬಂದಿದೆ. ಮೂಲ ಮಲಯಾಳಂ ಜತೆಗೆ ತೆಲುಗು, ಹಿಂದಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಆಸಿಫ್ ಅಲಿ ಮತ್ತು ಅನಸ್ವರ ರಾಜನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ ಈ ಚಿತ್ರವು ಜನವರಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸೂಪರ್‌ ಹಿಟ್ ಎನಿಸಿಕೊಂಡಿತು.

ತಾಂಡೇಲ್: ಮಾರ್ಚ್ 7ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ತಾಂಡೇಲ್‌ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.

ಮನಮೆಯ: ಮಾರ್ಚ್ 7 ರಂದು ಅಮೆಜಾನ್ ಪ್ರೈಮ್ ವಿಡಿಯೋ ಒಟಿ...