ಭಾರತ, ಏಪ್ರಿಲ್ 10 -- OTT releases this week: ಈ ವಾರ ಒಟಿಟಯಲ್ಲಿ ಹೊಸ ಸೌತ್‌ ಇಂಡಿಯನ್‌ ಸಿನಿಮಾಗಳನ್ನು ನೋಡಲು ಬಯಸಿದರೆ ನಿಮಗೆ ನಿರಾಶೆಯಾಗದು. ಬಾಸಿಲ್‌ ಜೋಸೆಫ್‌ ನಟನೆಯ ಮರ್ಡರ್‌ ಮಿಸ್ಟರಿ ಸಿನಿಮಾ ಪ್ರವೀಂಕೂಡು ಶಾಪ್ಪು, ಜಿವಿ ಪ್ರಕಾಶ್‌ ಕುಮಾರ್‌ ಅವರ ಕಿಂಗ್‌ಸ್ಟನ್‌ ಸೇರಿದಂತೆ ಹಲವು ಸಿನಿಮಾಗಳು ರಿಲೀಸ್‌ ಆಗಲಿವೆ. ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳು ಬಿಡುಗಡೆಯಾಗಲಿವೆ. ಈ ವಾರ ಕನ್ನಡದ ಯಾವ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಅಪ್‌ಡೇಟ್‌ ಇನ್ನೂ ದೊರಕಿಲ್ಲ. ಸದ್ದಿಲ್ಲದೆ ಯಾವುದಾದರೂ ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದರೆ ಅಚ್ಚರಿಯಿಲ್ಲ. ಏಪ್ರಿಲ್‌ ತಿಂಗಳ 7 - 13ರವರೆಗೆ ಯಾವೆಲ್ಲ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್‌ ಆಗಲಿದೆ ಎಂದು ನೋಡೋಣ.

ಒಟಿಟಿ ಬಿಡುಗಡೆ ದಿನಾಂಕ: ಏಪ್ರಿಲ್ 11

ಒಟಿಟಿ ಪ್ಲಾಟ್‌ಫಾರ್ಮ್: ಸೋನಿ ಲಿವ್‌, ಒಟಿಟಿ ಪ್ಲೇ‌ ಪ್ರೀಮಿಯಂ

ಭಾಷೆ: ಮಲಯಾಳಂ

ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸಿನಿಮಾ ಇದಾಗಿದೆ. ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ 1...