Bengaluru, ಮಾರ್ಚ್ 28 -- ತರುಣ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ತರುಣ್ ಶಿವಪ್ಪ ಹಾಗೂ ಮಾನಸಾ ತರುಣ್ ನಿರ್ಮಿಸಿರುವ ಸಿನಿಮಾ ʻಛೂ ಮಂತರ್‌ʼ. ನಟ ಶರಣ್‌ ನಾಯಕನಾಗಿ ನಟಿಸಿದ ಈ ಸಿನಿಮಾ, ಇದೀಗ ಅಮೆಜಾನ್‌ ಪ್ರೈಂ ಒಟಿಟಿಗೆ ಆಗಮಿಸಿದೆ.

ಸಂದೀಪ್ ಕಿಶನ್ ಅಭಿನಯದ ಮಜಾಕಾ ಚಿತ್ರ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ರೊಮ್ಯಾಂಟಿಕ್‌ ಹಾಸ್ಯ ಕಥಾವಸ್ತುವಿನೊಂದಿಗೆ ನಿರ್ಮಾಣಗೊಂಡ ಈ ಚಿತ್ರದಲ್ಲಿ ರೀತು ವರ್ಮ ನಾಯಕಿಯಾಗಿ ನಟಿಸಿದ್ದಾರೆ. ರಾವ್ ರಮೇಶ್, ಅನ್ಶು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಧನುಷ್ ನಾಯಕನಾಗಿ ನಟಿಸಿರುವ ಹಾಲಿವುಡ್ ಚಿತ್ರ ದಿ ಎಕ್ಸ್‌ಟ್ರಾರ್ಡಿನರಿ ಜರ್ನಿ ಆಫ್ ಫಕೀರ್ ಆಹಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರಕ್ಕೆ ಕೆನ್ ಸ್ಕಾಟ್ ನಿರ್ದೇಶನ ಮಾಡಿದ್ದಾರೆ. ಎರಿನ್ ಮೋರಿಯಾರ್ಟಿ, ಬೆರೆನಿಸ್ ಬೆಜೋ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಜೀವಾ, ರಾಶಿ ಖನ್ನಾ ನಾಯಕ ನಾಯಕಿಯಾಗಿ ನಟಿಸಿರುವ ಭಯಾನಕ ಚಿತ್ರ ಆಘತ್ತಿಯ (Aghathiyaa) ಕನ್ನಡ ಆವೃತ್ತಿ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆ...