Bangalore, ಮಾರ್ಚ್ 13 -- Azaad OTT Release Date: ಆಜಾದ್ ಚಿತ್ರವು ಕೆಲವೇ ಗಂಟೆಗಳಲ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ನಿಟ್ಟಿನಲ್ಲಿ ಒಟಿಟಿ ವೇದಿಕೆಯು ಇತ್ತೀಚೆಗೆ ಅಧಿಕೃತ ಹೇಳಿಕೆ ನೀಡಿದೆ. ಆಜಾದ್ ಚಿತ್ರದಲ್ಲಿ ಅಮನ್ ದೇವಗನ್ ಮತ್ತು ರಾಶಾ ಥಡಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಈ ಚಿತ್ರ ಅವರಿಬ್ಬರಿಗೂ ಮೊದಲ ಚಿತ್ರ. ಈ ಮೂಲಕ ಇವರಿಬ್ಬರು ಬಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ. ಇದು ಒಂದು ಪಿರಿಯಾಡಿಕ್ ರೊಮ್ಯಾಂಟಿಕ್ ಆಕ್ಷನ್ ಡ್ರಾಮಾ ಜಾನರ್‌ನ ಸಿನಿಮಾವಾಗಿದೆ.

ರಾಶಾ ಥಡಾನಿ ಮತ್ತು ಅಮನ್ ದೇವಗನ್ ಆಜಾದ್ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ನೀಡಿದ್ದಾರೆ. ರಾಶಾ ಥಡಾನಿ ಅವರ ತಾಯಿ ರವೀನಾ ಟಂಡನ್ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಅಮನ್ ದೇವಗನ್ ಬಾಲಿವುಡ್ ಸ್ಟಾರ್ ಹೀರೋ ಅಜಯ್ ದೇವಗನ್ ಅವರ ಸೋದರಳಿಯ. ರಾಶಾ ಥಡಾನಿ ಮತ್ತು ಅಮನ್ ದೇವಗನ್ ಎಂಬ ಸ್ಟಾರ್‌ ಕಿಡ್ಸ್‌ ನಟಿಸಿರುವ ಕಾರಣ ಈ ಸಿನಿಮಾ ಸಾಕಷ್ಟು ಹೈಪ್‌ ಕ್ರಿಯೆಟ್‌ ಮಾಡಿತ್ತು.

ಆಜಾ...