ಭಾರತ, ಮಾರ್ಚ್ 17 -- OTT Malayalam Thriller: ದಕ್ಷಿಣ ಭಾರತದ ಸಿನಿಮಾಗಳಿಗೆ ಒಟಿಟಿಯಲ್ಲಿ ಬೇಡಿಕೆಯಿದೆ. ವಿಶೇಷವಾಗಿ ಮಲಯಾಳಂ ಸಿನಿಮಾಗಳ ಕುರಿತು ಸಾಕಷ್ಟು ಜನರಿಗೆ ಮೋಹವಿದೆ. ಹೊಸ ಥ್ರಿಲ್ಲರ್ ಸಿನಿಮಾಗಳು ಯಾವಾಗ ಬರುತ್ತವೆ ಎಂದು ಅನೇಕ ಜನರು ಕಾಯುತ್ತಿರುತ್ತಾರೆ. ಅಂತಹ ಜನರು ಒಟಿಟಿಯಲ್ಲಿ ಇತ್ತೀಚಿನ ಮೂರು ಮಲಯಾಳಂ ಚಲನಚಿತ್ರಗಳನ್ನು‌ ಮಿಸ್‌ ಮಾಡದೆ ನೋಡಿ. ಇವುಗಳಲ್ಲಿ ಎರಡು ಈಗಾಗಲೇ ಒಟಿಟಿಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ. ಇನ್ನೊಂದು ಥ್ರಿಲ್ಲರ್‌ ಸಿನಿಮಾ ಈ ವಾರ ಬಿಡುಗಡೆಯಾಗಲಿದೆ.

ಈ ಸಿನಿಮಾ ಅನೇಕ ಕಾರಣಗಳಿಂದ ಗಮನ ಸೆಳೆಯುತ್ತಿದೆ. ಹಳೆಯ ಮಮ್ಮುಟ್ಟಿಯನ್ನು ಎಐ ಮೂಲಕ ರಚಿಸಲಾಗಿದೆ. ಚಿತ್ರದ ಗ್ರಾಫಿಕ್ಸ್‌ ಉತ್ತಮವಾಗಿದೆ. ಇದು ಉತ್ತಮ ಥ್ರಿಲ್ಲರ್ ಅನುಭವವನ್ನು ನೀಡುತ್ತದೆ. ಈ ಕ್ರೈಮ್ ಥ್ರಿಲ್ಲರ್ 40 ವರ್ಷಗಳ ಹಿಂದೆ ನಡೆದ ನಟಿಯೊಬ್ಬಳ ಕೊಲೆಯ ಪೊಲೀಸ್ ತನಿಖೆಯ ಸುತ್ತ ಸುತ್ತುತ್ತದೆ. ಆಸಿಫ್ ಅಲಿ ಮತ್ತು ಅನಸ್ವರ ರಾಜನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಜೋಫಿನ್ ಟಿ. ಚಾಕೊ ನಿರ್ದೇಶಿಸಿದ್ದಾ...