Bengaluru, ಜನವರಿ 29 -- OTT Malayalam Movies: ಮಲಯಾಳಂ ಸಿನಿಮಾಗಳಿಗೆ ಒಟಿಟಿ ವೇದಿಕೆಗಳಲ್ಲಿ ದೊಡ್ಡ ಮಟ್ಟದ ಕ್ರೇಜ್‌ ಇದೆ. ಕೇವಲ ಮಲಯಾಳಿಗಳಷ್ಟೇ ಅಲ್ಲದೆ, ಬೇರೆ ಬೇರೆ ಭಾಷೆಯ ಸಿನಿಮಾ ಪ್ರೇಕ್ಷಕರೂ ಮಲಯಾಳಂ ಸಿನಿಮಾಗಳತ್ತ ದೃಷ್ಟಿನೆಟ್ಟಿದ್ದಾರೆ. ಹೊಸ ಹೊಸ ಸಿನಿಮಾಗಳು ಯಾವೆಲ್ಲ ಒಟಿಟಿಗೆ ಬರುತ್ತಿವೆ ಎಂದೂ ಅತ್ತ ಕಡೆ ಒಂದು ಕಣ್ಣಿಟ್ಟಿದ್ದಾರೆ. ಈಗ ಇನ್ನೇನು ಶೀಘ್ರದಲ್ಲಿ ಬಹುನಿರೀಕ್ಷಿತ ನಾಲ್ಕು ಥ್ರಿಲ್ಲರ್‌ ಸಿನಿಮಾಗಳು ಒಟಿಟಿ ಅಂಗಳಕ್ಕೆ ಎಂಟ್ರಿಕೊಡಲಿವೆ. ಆ ನಾಲ್ಕು ಸಿನಿಮಾಗಳಲ್ಲಿ ಎರಡು ಬ್ಲಾಕ್‌ ಬಸ್ಟರ್‌ ಎನಿಸಿಕೊಂಡರೆ, ಇನ್ನೆರಡು ಎವರೇಜ್‌ ಪಟ್ಟ ಪಡೆದಿವೆ.

ಐಡೆಂಟಿಟಿ ಮೂವಿ ಜನವರಿ 31ರಂದು ಜೀ 5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಇದು ಮಲಯಾಳಂ, ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. ಈ ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಟೊವಿನೊ ಥಾಮಸ್ ಮತ್ತು ತ್ರಿಷಾ ಮುಖ್ಯ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು ಕೊಲೆ ಪ್ರಕರಣದ ತನಿಖೆಯ ಸುತ್ತ ಸುತ್ತುತ್ತದೆ....