ಭಾರತ, ಮಾರ್ಚ್ 12 -- OTT Malayalam Movies: ಮಲಯಾಳಂ ಸಿನಿಮಾಗಳಿಗೆ ಈಗ ಭಾರತಾದ್ಯಂತ ವೀಕ್ಷಕರು ಇದ್ದಾರೆ. ಮೊದಲೆಲ್ಲ ಮಲಯಾಳಂ ಸಿನಿಮಾಗಳು ಥಿಯೇಟರ್‌ನಲ್ಲಿ ಮಾತ್ರ ಬಿಡುಗಡೆಯಾಗುತ್ತಿತ್ತು. ಒಟಿಟಿಗಳ ಆಗಮನದ ಬಳಿಕ ಭಾರತದ ವಿವಿಧ ರಾಜ್ಯಗಳಲ್ಲಿರುವ ಜನರು ಮಲಯಾಳಂ ಸಿನಿಮಾಗಳನ್ನು ಆಸ್ವಾದಿಸುತ್ತಿದ್ದಾರೆ. ಹೊಸ ಮಲಯಾಳಂ ಚಿತ್ರಗಳು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾವಾಗ ಬರುತ್ತವೆ ಎಂದು ಅನೇಕ ಜನರು ಕಾಯುತ್ತಿದ್ದಾರೆ. ಅಂತಹವರಿಗಾಗಿಯೇ ಈ ವಾರ ನಾಲ್ಕು ಮಲಯಾಳಂ ಚಿತ್ರಗಳು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುತ್ತಿವೆ. ಈ ನಾಲ್ಕು ಚಿತ್ರಗಳಲ್ಲಿ ಪೊನ್ಮನ್ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರ ಕನ್ನಡದಲ್ಲಿಯೂ ಸ್ಟ್ರೀಮಿಂಗ್‌ ಆಗಲಿದೆ.

ಮಲಯಾಳಂನ ಡಾರ್ಕ್ ಕಾಮಿಡಿ ಸಿನಿಮಾ 'ಪೊನ್ಮನ್‌/ಪೊನ್‌ಮನ್' ಈ ವಾರ ಒಟಿಟಿಗೆ ಬರುತ್ತಿದೆ. ಜಿಯೋ ಹಾಟ್‌ಸ್ಟಾರ್ (ಡಿಸ್ನಿ+ ಹಾಟ್‌ಸ್ಟಾರ್) ಮಾರ್ಚ್ 14 ರಂದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಚಿತ್ರವು ಮಲಯಾಳಂ ಜೊತೆಗೆ ತೆಲುಗು, ತಮಿಳು, ಕನ್ನಡ ಮತ...