ಭಾರತ, ಏಪ್ರಿಲ್ 8 -- OTT Horror Movies: ಒಟಿಟಿಯಲ್ಲಿ ಈ ವಾರ ಹೊಸ ಹಾರರ್‌ ಸಿನಿಮಾಗಳು ಒಂದಾದ ಮೇಲೊಂದು ಆಗಮಿಸುತ್ತಿವೆ. ಅದರಂತೆ ಕನ್ನಡದ ಒಂದು ಇನ್ನುಳಿದಂತೆ ತೆಲುಗು, ತಮಿಳು, ಹಿಂದಿ ಭಾಷೆಯ ಒಂದೊಂದು ಸಿನಿಮಾಗಳು ಒಟಿಟಿಗೆ ಆಗಮಿಸುತ್ತಿವೆ. ಈ ನಾಲ್ಕರಲ್ಲಿ ಒಂದು ಸಿನಿಮಾ ನೇರವಾಗಿ ಒಟಿಟಿ ಕದ ತಟ್ಟುತ್ತಿದೆ. ಆ ನಾಲ್ಕು ಸಿನಿಮಾಗಳ ಕುರಿತ ವಿವರ ಇಲ್ಲಿದೆ.

ರಾಕ್ಷಸ: ಮಮ್ಮಿ, ದೇವಕಿ, ಮಾಫಿಯಾ ಸಿನಿಮಾಗಳನ್ನು ನಿರ್ದೇಶಿಸಿರುವ ಲೋಹಿತ್‌ ಎಚ್‌, ರಾಕ್ಷಸ ಸಿನಿಮಾಕ್ಕೂ ಆಕ್ಷನ್‌ ಕಟ್‌ ಹೇಳಿದ್ದಾರೆ. ಟೈಮ್ ಲೂಪ್ ಹಾರರ್ ಥ್ರಿಲ್ಲರ್‌ ಜಾನರ್‌ಗೆ ಸೇರುವ ರಾಕ್ಷಸ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸಿದ್ದಾರೆ. ಅವರಿಗೆ ಸೋನಲ್ ಮೊಂಥೆರೋ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಶೋಭರಾಜ್, ವತ್ಸಲಾ ಮೋಹನ್, ಸಿದ್ಲಿಂಗು ಶ್ರೀಧರ್, ಆರ್ನ ರಾಥೋಡ್ ಸೇರಿ ಹಲವರು ತಾರಾಬಳಗದಲ್ಲಿದ್ದಾರೆ. ಜೇಬಿನ್ ಪಿ ಜೋಕಬ್ ಛಾಯಾಗ್ರಹಣ. ವಿನೋದ್ ಸಾಹಸ ನಿರ್ದೇಶನ, ಅಜನೀಶ್ ಲೋಕನಾಥ್ ಸಂಗೀತವಿದೆ. ಈ ಸಿನಿಮಾ ಸನ್‌ ನೆಕ್ಸ್ಟ್‌ ಒಟಿಟಿ...