ಭಾರತ, ಮಾರ್ಚ್ 12 -- OTT Family Drama: ಈ ವಾರ ತೆಲುಗಿನ ಸಿನಿಮಾವೊಂದು ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸಿನಿಮಾದ ಹೆಸರು ಬಾಪು. ತೆಲಂಗಾಣದ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾದ 'ಬಾಪು' ಚಿತ್ರವು ಬಿಡುಗಡೆಗೆ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಈ ಚಿತ್ರಕ್ಕೂ ತೆಲುಗಿನ 'ಬಲಗಂ' ಚಿತ್ರಕ್ಕೂ ಹೋಲಿಕೆ ಇದೆ. ಬಾಪು ಚಿತ್ರ ಕಳೆದ ತಿಂಗಳು ಫೆಬ್ರವರಿ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಗ್ರಾಮೀಣ ಕೌಟುಂಬಿಕ ಹಾಸ್ಯ ನಾಟಕ ಚಿತ್ರದಲ್ಲಿ ಬ್ರಹ್ಮಾಜಿ, ಅಮಾನಿ ಮತ್ತು ಸುಧಾಕರ್ ರೆಡ್ಡಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷೆಯಷ್ಟು ಗಳಿಕೆ ಮಾಡಿಲ್ಲ. ಇದೀಗ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಬಾಪು ಚಿತ್ರ ಕಳೆದ ಶುಕ್ರವಾರ (ಮಾರ್ಚ್ 7) ಜಿಯೋಹಾಟ್‌ಸ್ಟಾರ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದು ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯ. ತೆಲುಗು ಜೊತೆಗೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಸಿನ...