Bangalore, ಮಾರ್ಚ್ 15 -- Officer On Duty OTT Release Date: ಆಫೀಸರ್‌ ಆನ್‌ ಡ್ಯೂಟಿ ಎಂಬ ಮಲಯಾಳಂ ಸಿನಿಮಾ ಒಟಿಟಿಯತ್ತ ಮುಖ ಮಾಡಿದೆ. ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ. ಮಲಯಾಳಂ ನಟ ಕುಂಚಾಕೊ ಬೋಬನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಆಫೀಸರ್ ಆನ್ ಡ್ಯೂಟಿ' ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಕ್ರೈಮ್ ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದೆ. ಬಾಕ್ಸ್‌ ಆಫೀಸ್‌ನಲ್ಲಿಯೂ ಉತ್ತಮ ಗಳಿಕೆ ಮಾಡಿದೆ. ಈ ಚಿತ್ರವು ಫೆಬ್ರವರಿ 20 ರಂದು ಮಲಯಾಳಂನಲ್ಲಿ ಬಿಡುಗಡೆಯಾಗಿತ್ತು. ಆಫೀಸರ್ ಆನ್ ಡ್ಯೂಟಿ ಚಿತ್ರದ ಒಟಿಟಿ ಸ್ಟ್ರೀಮಿಂಗ್ ದಿನಾಂಕವನ್ನು ಇದೀಗ ಅಂತಿಮಗೊಳಿಸಲಾಗಿದೆ.

ಆಫೀಸರ್ ಆನ್ ಡ್ಯೂಟಿ ಚಿತ್ರವು ಮಾರ್ಚ್ 20 ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ನೆಟ್‌ಫ್ಲಿಕ್ಸ್‌ ಇಂದು (ಮಾರ್ಚ್ 15) ಸೋಷಿಯಲ್‌ ಮೀಡಿಯಾದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಆಫೀಸರ್ ಚಿತ್ರ ಮಾರ್ಚ್ 20 ರಂದು ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ...