ಭಾರತ, ಮಾರ್ಚ್ 26 -- ಭಾರತದಲ್ಲಿ ಆನ್‌ಲೈನ್‌ ಸ್ಟ್ರೀಮಿಂಗ್‌ಗಳು ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿತ್ತು. ಹೆಚ್ಚಾಗಿ ಯೂಟ್ಯೂಬ್‌ನಲ್ಲಿ ಉಚಿತವಾಗಿ ಸ್ಟ್ರೀಮಿಂಗ್‌ ಮಾಡಲಾಗುತ್ತಿತ್ತು. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಬಂದ ಬಳಿಕ ದೊಡ್ಡ ಬಜೆಟ್‌ನ ವೆಬ್‌ ಸರಣಿಗಳು ಆರಂಭವಾದವು. ಸೈಫ್ ಅಲಿ ಖಾನ್ ನೆಟ್‌ಫ್ಲಿಕ್ಸ್‌ನಲ್ಲಿ ಸೇಕ್ರೆಡ್ ಗೇಮ್ಸ್‌ನಲ್ಲಿ ನಟಿಸಿದರು. ವಿವೇಕ್ ಒಬೆರಾಯ್ ಅಮೆಜಾನ್‌ ಪ್ರೈಮ್ ವೀಡಿಯೊದಲ್ಲಿ ಇನ್‌ಸೈಡ್ ಎಡ್ಜ್‌ನಲ್ಲಿ ಕಾಣಿಸಿಕೊಂಡರು. ಸಹಜವಾಗಿ ಈ ನಟರು ಒಟಿಟಿಯಲ್ಲಿ ನಟಿಸಲು ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು. ಒಟಿಟಿಗೆ ಹೀಗೆ ಜನಪ್ರಿಯ ಕಲಾವಿದರು ಪ್ರವೇಶಿಸಿದಾಗ ಇವರ ಸಂಭಾವನೆ ಹೆಚ್ಚುತ್ತ ಹೋಯಿತು. ಇದೀಗ ನಾವು ಹೇಳುತ್ತಿರುವ ನಟರೊಬ್ಬರು ಒಟಿಟಿ ವೆಬ್‌ ಸರಣಿಯಲ್ಲಿ ನಟಿಸಲು ನೂರು ಕೋಟಿ ರೂಪಾಯಿಗಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದಾರೆ.

2021ರಲ್ಲಿ ಅಜಯ್ ದೇವಗನ್ ಹಿಟ್ ಬ್ರಿಟಿಷ್ ಶೋ ಲುಥರ್‌ನ ಭಾರತೀಯ ಅವತರಣಿಕೆಯಲ್ಲಿ ನಟಿಸಲು ಒಪ್ಪಂದಕ್ಕೆ ಸಹಿ ಹಾಕಿದರು. ಇಡ್ರಿಸ್ ಎಲ್ಬಾದಿಂದ ಜವಾಬ್ದಾರಿಯನ್ನು...