Bengaluru, ಫೆಬ್ರವರಿ 17 -- OTT Action Movies: ಒಟಿಟಿಯಲ್ಲಿ ಆಕ್ಷನ್‌ ಸಿನಿಮಾ ವೀಕ್ಷಕರಿಗೆ ಇದೀಗ ಧಮಾಕಾ ಶುರುವಾಗಿದೆ. ಸಾಲು ಸಾಲು ಮಾಸ್‌ ಆಕ್ಷನ್‌ ಸಿನಿಮಾಗಳ ಆಗಮನವಾಗಿವೆ. ಆ ಪೈಕಿ ಈ ಮೂರು ಚಿತ್ರಗಳು, ಈಗಾಗಲೇ ಒಟಿಟಿಯಲ್ಲಿ ಪ್ರಸಾರವಾಗುತ್ತಿವೆ. ಅದರಲ್ಲಿ ಕನ್ನಡದ ಒಂದು ಸಿನಿಮಾ ಸಹ ಸೇರಿದೆ. ಆ ಸಿನಿಮಾಗಳು ಯಾವವು? ಅವುಗಳ ವೀಕ್ಷಣೆ ಯಾವ ಒಟಿಟಿಯಲ್ಲಿ ಎಂಬಿತ್ಯಾದಿ ವಿವರ ಇಲ್ಲಿದೆ.

ಮಲಯಾಳಂನ ಆಕ್ಷನ್ ಸಿನಿಮಾ ಮಾರ್ಕೊ ಕಳೆದ ವಾರ ಅಂದರೆ ಫೆಬ್ರವರಿ 14ರಿಂದ ಸೋನಿ ಲಿವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಇದು ಮಲಯಾಳಂ ಜತೆಗೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಉನ್ನಿ ಮುಕುಂದನ್ ಅಭಿನಯದ ಮಾರ್ಕೊ ಡಿಸೆಂಬರ್ 20 ರಂದು ಮಲಯಾಳಂನಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಅಲ್ಲಿಂದ ಕನ್ನಡ ಸೇರಿ ತೆಲುಗಿನಲ್ಲಿಯೂ ಬಿಡುಗಡೆಯಾಯಿತು. ಇದೀಗ ಒಟಿಟಿಯಲ್ಲಿ ಈ ಆಕ್ಷನ್‌ ಸಿನಿಮಾ ಹೆಚ್ಚೆಚ್ಚು ವೀಕ್ಷಣೆಯಾಗುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ.

ಇದನ್ನೂ ಓದಿ: ಒಟಿಟಿಯಲ್ಲಿ ...