ಭಾರತ, ಮಾರ್ಚ್ 3 -- Oscars 2025 Winners List: 97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಮಾರ್ಚ್ 3ರಂದು ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 5:30ಕ್ಕೆ ನಡೆದಿದೆ. ಸಿನಿಮಾ ಕ್ಷೇತ್ರಕ್ಕೆ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್‌ ಈ ಪ್ರಶಸ್ತಿ ನೀಡುತ್ತ ಬಂದಿದೆ. ಆದರೆ, ಈ ಸಲದ ಪ್ರಶಸ್ತಿ ರೇಸ್‌ನಲ್ಲಿದ್ದ ಭಾರತದ ಅನುಜಾ ಕಿರುಚಿತ್ರ ಪ್ರಶಸ್ತಿಯಿಂದ ಹಿಂದೆ ಸರಿದಿದ್ದು, ಭಾರತೀಯರಿಗೆ ನಿರಾಸೆಯಾಗಿದೆ.

2023ರಲ್ಲಿ ಗುಣೀತ್ ಮೋಂಗಾ ಅವರ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದಿತ್ತು. ಈ ಬಾರಿಯೂ ಸಹ, ಗುಣೀತ್ ಮೋಂಗಾ ಅವರ 'ಅನುಜಾ' ಕಿರು ಚಿತ್ರ ಈ ಪ್ರಶಸ್ತಿಯನ್ನು ಗೆಲ್ಲುವ ಸ್ಪರ್ಧೆಯಲ್ಲಿತ್ತು. ಅತ್ಯುತ್ತಮ ಆಕ್ಷನ್ ಲೈವ್ ಕಿರುಚಿತ್ರ ವಿಭಾಗದಲ್ಲಿ "ಅನುಜಾ" ನಾಮನಿರ್ದೇಶನಗೊಂಡಿತು. ಅಂತಿಮವಾಗಿ "ಐ ಆಮ್‌ ನಾಟ್ ಎ ರೋಬೋಟ್‌" ಈ ವಿ...