ಭಾರತ, ಮಾರ್ಚ್ 3 -- 2025ರ ಆಸ್ಕರ್‌ ಪ್ರಶಸ್ತಿ ಘೋಷಣೆಯಾಗಿದೆ. ನಟ ಆಡ್ರಿಯನ್ ಬ್ರಾಡಿ ತಮ್ಮ ಎರಡನೇ ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬ್ರಾಡಿ ಕಾರ್ಬೆಟ್‌ನ 'ದಿ ಬ್ರೂಟಲಿಸ್ಟ್' ಚಿತ್ರದಲ್ಲಿನ ತಮ್ಮ ಅಮೋಘ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ತನ್ನದಾಗಿಸಿಕೊಂಡರು. ತಿಮೋತಿ ಚಾಲಮೆಟ್, ಕೋಲ್ಮನ್ ಡೊಮಿಂಗೊ, ರಾಲ್ಫ್ ಫಿಯೆನ್ನೆಸ್ ಮತ್ತು ಸೆಬಾಸ್ಟಿಯನ್ ಸ್ಟಾನ್ ಅವರನ್ನು ಹಿಂದಿಕ್ಕಿ ಬೆಸ್ಟ್‌ ಆಕ್ಟರ್‌ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

97ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ರಾಡಿ ತಮ್ಮ ಟ್ರೋಫಿಯನ್ನು ಸ್ವೀಕರಿಸಲು ವೇದಿಕೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಚೂಯಿಂಗ್ ಗಮ್ ಅನ್ನು ತಮ್ಮ ಕೈಗೆ ಉಗುಳುತ್ತ ವೇದಿಕೆಗೆ ಎಂಟ್ರಿ ನೀಡಿದರು. ಜೂಯಿಂಗ್‌ಗಮ್‌ ಅನ್ನು ತನ್ನ ಸಂಗಾತಿ ಜಾರ್ಜಿನಾ ಚಾಪ್‌ಮನ್‌ಗೆ ಎಸೆದರು.

ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್ ಸ್ಥಳದಲ್ಲಿ ಅವರ ಭಾಷಣದ ಸಮಯದಲ್ಲಿ ಅಕಾಡೆಮಿಯ ಕಾರ್ಯಕ್ರಮದ ಅವಧಿ ಮುಗಿದಿತ್ತು. ಕಾರ್ಯಕ್ರಮ ಮುಗಿಯುವ ಮ್ಯೂಸಿಕ್‌ ಕೇಳಲಾರದಂಭಿ...