ಭಾರತ, ಮಾರ್ಚ್ 17 -- Vaishno Devi temple Row: ಕತ್ರಾದ ವೈಷ್ಣೋದೇವಿ ದೇಗುಲದ ಮೂಲ ಶಿಬಿರದಲ್ಲಿ ಮದ್ಯ ಸೇವಿಸಿದ ಆರೋಪದ ಮೇಲೆ ಬಾಲಿವುಡ್ ಇನ್‌ಫ್ಲೂಯೆನ್ಸರ್‌ "ಓರ್ರಿ" ಎಂದೇ ಜನಪ್ರಿಯರಾಗಿರುವ ಓರ್ಹಾನ್ ಅವತ್ರಮಣಿ ಮತ್ತು ಇತರ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದಾದ ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ದೀರ್ಘ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 'ನೆಲದ ಕಾನೂನನ್ನು' ಉಲ್ಲಂಘಿಸುವ ಮತ್ತು ಧಾರ್ಮಿಕ ಭಾವನೆಗಳಿಗೆ 'ಅಗೌರವ' ತೋರಿಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಂತಹ ಪ್ರಕರಣಗಳನ್ನು "ಐರನ್‌ ಹ್ಯಾಂಡ್‌"ಗಳಿಂದ ಪರಿಗಣಿಸಲು ನಿರ್ಧರಿಸಿದ್ದೇವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

"ದೇಶದ ಕಾನೂನನ್ನು ಪಾಲಿಸದವರಿಗೆ, ಶಾಂತಿಯನ್ನು ಭಂಗಗೊಳಿಸಲು ಯಾವುದೇ ವಿಧಾನವನ್ನು ಅನುಸರಿಸುವವರಿಗೆ, ವಿಶೇಷವಾಗಿ ಮದ್ಯ ಸೇವನೆ, ಮಾದಕ ದ್ರವ್ಯ ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಾರ್ಚ್‌ 15ರಂದು ಈ ಕು...