ಭಾರತ, ಮಾರ್ಚ್ 29 -- ದೇಹದ ಸ್ವಚ್ಛತೆಯಲ್ಲಿ ಬಾಯಿಯ ಸ್ವಚ್ಛತೆಯು ಬಹಳ ಮುಖ್ಯವಾಗಿದೆ. ಬಾಯಿಯನ್ನು ಸ್ವಚ್ಛವಾಗಿಡದಿದ್ದರೆ ಉಸಿರಿನ ದುರ್ಗಂಧ, ಹಲ್ಲು ಹುಳುಕಾಗುವುದು, ದಂತ ಕ್ಷಯ, ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ನಾವು ಸೇವಿಸುವ ಆಹಾರದ ಜೊತೆಗೆ ಬಾಯಿಯಲ್ಲಿರುವ ಕೊಳೆ ನಮ್ಮ ಹೊಟ್ಟೆ ಸೇರಿ ಅನಾರೋಗ್ಯವುಂಟಾಗಬಹುದು. ದಂತಕುಳಿ (ಕ್ಯಾವಿಟಿ) ಸಮಸ್ಯೆಯು ಅಸಹನೀಯ ನೋವನ್ನು ತರುತ್ತದೆ. ಆಹಾರವನ್ನು ಸರಿಯಾಗಿ ಅಗಿದು ತಿನ್ನಲು ಆಗದೇ ಇರುವ ಕಾರಣದಿಂದ ಅಜೀರ್ಣ ಸಮಸ್ಯೆಯೂ ಎದುರಾಗಬಹುದು. ಅದಕ್ಕಾಗಿ ದಂತವೈದ್ಯರು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ, ಹೀಗೆ ದಿನಕ್ಕೆ ಎರಡು ಸಲ ಹಲ್ಲುಜ್ಜುವ ಸಲಹೆ ನೀಡುತ್ತಾರೆ.

ಆದರೆ ಕೆಲವರು ಬೆಳಿಗ್ಗೆಯೇನೋ ಹಲ್ಲುಜ್ಜುತ್ತಾರೆ, ಆದರೆ ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದನ್ನು ಮರೆತುಬಿಡುತ್ತಾರೆ. ಬಾಯಿಯ ನೈರ್ಮಲ್ಯದ ಕೊರತೆ ಕ್ಯಾವಿಟಿಗಿಂತಲೂ ಹೆಚ್ಚಿನ ಅಪಾಯ ತಂದೊಡ್ಡಬಹುದು. ಅದು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದು ಡಾ ಸೌರಭ್‌ ಸೇಠಿ, ತಮ್ಮ...