Bangalore, ಜುಲೈ 11 -- ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ, ಬಿಕ್ಕಟ್ಟು, ಬೇಗುದಿ, ಬಣ ಬಡಿದಾಟ ಮುಂದುವರಿಯುತ್ತಿದ್ದು ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಗೋಚರಿಸುತ್ತಿದೆ. ರಾಜ್ಯ ಮಟ್ಟದ ನಾಯಕರ ಕಚ್ಚಾಟದಿಂದಾಗಿ ಕಾರ್ಯಕರ್ತರೂ ರೋಸಿ ಹೋಗಿದ್ದು ಪಕ್ಷದ ಬಗ್ಗೆ ನಿರುತ್ಸಾಹ ಹೊಂದಿರುವುದು ಕಂಡುಬರುತ್ತಿದೆ. ಪಕ್ಷ ಸಂಘಟನೆಗಾಗಿ ದುಡಿಯುವ ಪಕ್ಷ ನಿಷ್ಠ ಕಾರ್ಯಕರ್ತರು ಹುರುಪು ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಬಿಜೆಪಿಯಲ್ಲಿ ಆಯಕಟ್ಟಿನ ಹುದ್ದೆ ದೊರೆಯಬೇಕಾದರೆ ಒಂದೋ ಲಿಂಗಾಯಿತ ಆಗಿರಬೇಕು, ಇಲ್ಲವೇ ಒಕ್ಕಲಿಗನಾಗಿರಬೇಕು ಎನ್ನುವಂತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗ ಮುಖ್ಯಮಂತ್ರಿ ಆದವರು ಬಿ.ಎಸ್.‌ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ. ಅವರೆಲ್ಲರೂ ಲಿಂಗಾಯಿತ ಸಮುದಾಯಕ್ಕೆ ಸೇರಿದವರು. ಅದನ್ನು ಹೊರತುಪಡಿಸಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದವರು ಕರಾವಳಿಯ ಸದಾನಂದ ಗೌಡ ಓರ್ವರೇ.

ಬಿಜೆಪಿಯ ಮಾಸ್‌ ಲೀಡರ್‌ ಎಂದೇ ಬಿಂಬಿತರಾಗಿರುವ ...