ಭಾರತ, ಫೆಬ್ರವರಿ 18 -- ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಂಸ್ಥೆ ತನ್ನ ಸೇವೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಹಾಗೂ ಡಿಜಿಟಲೀಕರಣಗೊಳಿಸುವ ಸಲುವಾಗಿ ಹೊಸ ಸೇವೆಯನ್ನು ಆರಂಭಿಸಿದೆ. ಅದುವೇ 'ಒನ್‌ ಮ್ಯಾನ್‌ ಆಫೀಸ್‌ (OMO)' ಎನ್ನುವ ಮೊಬೈಲ್‌ ಅಪ್ಲಿಕೇಶನ್‌ ಸೇವೆ. ಈ ಸೇವೆ ಫೆ.17ರಂದು ಆರಂಭವಾಗಿದ್ದು, ಎಲ್‌ಐಸಿ ಏಜೆಂಟ್‌, ಡೆವಲಪ್‌ಮೆಂಟ್‌ ಆಫೀಸರ್‌, ಹಿರಿಯ ಬ್ಯುಸಿನೆಸ್‌ ಅಸೋಸಿಯೇಟ್‌ ಸೇರಿ ಹಲವು ವಿಭಾಗದ ಸೇವಾದಾರರ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ನೆರವಾಗಲಿದೆ ಎಂದು ಎಲ್‌ಐಸಿ ತಿಳಿಸಿದೆ.

2047ರ ಒಳಗೆ ಎಲ್ಲರಗೂ ವಿಮೆ (ಇನ್ಶುರೆನ್ಸ್‌ ಫಾರ್‌ ಆಲ್‌) ಎಂಬ ಎಲ್‌ಐಸಿಯ ದೀರ್ಘಕಾಲದ ಗುರಿಯನ್ನು ಸಾಕಾರಗೊಳಿಸುವಲ್ಲಿ ಈ ಸೇವೆ ಮಹತ್ವದ ಹೆಜ್ಜೆಯಾಗಿದೆ. ಒಎಮ್‌ಒ ಸೇವೆ (ಒನ್‌ ಮ್ಯಾನ್‌ ಆಫೀಸ್‌) ಡಿಜಿಟಲ್‌ ಪಾಲಿಸಿ ಮಾರಾಟ, ವಹಿವಾಟುಗಳ ಬೆಳವಣಿಗೆಯನ್ನು ಅರಿಯಲು, ಗ್ರಾಹಕ ಸೇವೆ ಮತ್ತು ಎಲ್‌ಐಸಿ ಏಜೆಂಟ್‌ಗಳಿಗೆ ತರಬೇತಿಯನ್ನು ನೀಡಲು ಬಹಳ ಸಹಕಾರಿಯಾಗಲಿದೆ ಎಂದು ಎಲ್‌ಐಸಿ ಸಿಇಒ ಮತ್ತು ಮ್ಯಾನೆಜಿಂಗ್‌...