Bangalore, ಏಪ್ರಿಲ್ 9 -- Om Puri: ದಿವಂಗತ ನಟ ಓಂಪುರಿ ಅವರು ಬಾಲಿವುಡ್‌ ಮಾತ್ರವಲ್ಲದೆ ಉರ್ದು, ಮಲಯಾಳಂ, ಬಂಗಾಳಿ, ಕನ್ನಡ, ಇಂಗ್ಲಿಷ್‌, ಪಂಜಾಬಿ, ಗುಜರಾತಿ, ತೆಲುಗು ಮತ್ತು ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದರು. ಜಗತ್ತಿನ ಪ್ರಮುಖ ನಟರ ಸಾಲಿಗೆ ಸೇರಿರುವ ಓಂಪುರಿಯವರ ಮೊದಲ ಪತ್ನಿಯ ಹೆಸರು ಸೀಮಾ ಕಪೂರ್‌. ಸಿದ್ಧಾರ್ಥ್ ಕಣ್ಣನ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಓಂಪುರಿ ಜತೆಗೆ ತನ್ನ ಸಂಬಂಧ ಮತ್ತು ಓಂಪುರಿಯಿಂದ ತೊಂದರೆಗೆ ಒಳಗಾದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ನನಗೂ ಓಂಪುರಿಗೂ ಮದುವೆಯಾಗಿತ್ತು. ನಾನು ಗರ್ಭಿಣಿಯಾಗಿದ್ದೆ. ಆದರೆ, ಆ ಸಮಯದಲ್ಲಿ ಓಂಪುರಿಗೆ ಬೇರೊಬ್ಬ ಮಹಿಳೆ ಜತೆ ಅಕ್ರಮ ಸಂಬಂಧ ಇರುವ ಮಾಹಿತಿ ನನಗೆ ದೊರಕಿತು. ಈ ಸಂದರ್ಭದಲ್ಲಿ ನಮ್ಮ ಸಂಬಂಧ ಕೊನೆಗೊಂಡಿತು ಎಂದು ಸೀಮಾ ಕಪೂರ್‌ ಹೇಳಿದ್ದಾರೆ. ಆತನಿಗೆ ಅಕ್ರಮ ಸಂಬಂಧ ಇದ್ದರೂ, ನಾನು ಗರ್ಭಿಣಿಯಾಗಿರುವ ಕಾರಣ "ಪರಿಸ್ಥಿತಿ ಸರಿಮಾಡಿಕೊಂಡು ಹೋಗಬಹುದು" ಎಂದುಕೊಂಡಿದ್ದೆ. "ಆದರೆ, ಆಗ ಪರಿಸ್ಥಿತಿ ನನ್ನ ನಿಯಂತ್ರಣದಲ್ಲಿ ಇರಲಿಲ್ಲ" ...