ಭಾರತ, ಮಾರ್ಚ್ 12 -- Om Beach Gokarna: ಬೇಸಿಗೆ ರಜೆ ಆರಂಭವಾದ ಕೂಡಲೇ ಜನರು ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡ್ತಾರೆ. ಬಿಸಿಲಿನ ಝಳ ಜಾಸ್ತಿ ಇದ್ರೂ ಮಕ್ಕಳ ಹಟಕ್ಕೆ ಟ್ರಿಪ್ ಆಯೋಜಿಸುತ್ತಾರೆ. ಹಲವರಿಗೆ ಕಡಲತೀರಗಳೆಂದರೆ ಅದೇನೋ ಆಕರ್ಷಣೆ. ಅದರಲ್ಲೂ ಬೇಸಿಗೆಯಲ್ಲಿ ಸಮುದ್ರತೀರಗಳತ್ತ ಪ್ರವಾಸ ಹೋಗಲು ಜನ ಹೆಚ್ಚು ಇಷ್ಟಪಡುತ್ತಾರೆ. ಭಾರತದಲ್ಲಿ ಸಾಕಷ್ಟು ಸಮುದ್ರತೀರಗಳಿವೆ. ಇದರಲ್ಲಿ ಹಲವು ಭಿನ್ನವಾಗಿವೆ. ಇದರಲ್ಲಿ ವಿಶಿಷ್ಠವಾಗಿರುವ ಬೀಚ್ ಒಂದರ ಬಗ್ಗೆ ನಾವಿಲ್ಲಿ ಹೇಳುತ್ತೇವೆ.

ಹೌದು ನಾವೀಗ ಹೇಳಲು ಹೊರಟಿರುವ ಬೀಚ್ ಎತ್ತರದಿಂದ ನೋಡಿದಾಗ ಓಂ ಆಕಾರದಲ್ಲಿ ಕಾಣಿಸುತ್ತದೆ. ಭಾರತದಲ್ಲಿ ಅತ್ಯಂತ ವಿಭಿನ್ನವಾಗಿರುವ ಸಮುದ್ರತೀರವಿದು. ಅಂದ ಹಾಗೆ ಈ ಬೀಚ್ ಇರುವುದು ಕರ್ನಾಟಕದಲ್ಲಿ ಎನ್ನುವುದು ವಿಶೇಷ.

ಓಂ ಆಕಾರದ ಸಮುದ್ರತೀರವಿರುವುದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ. ಈ ಆಕಾರ ಇರುವ ಕಾರಣಕ್ಕೆ ಇದನ್ನು ಓಂ ಬೀಚ್ ಎಂದೂ ಕರೆಯುತ್ತಾರೆ. ಪ್ರವಾಸಿಗರನ್ನು ಸೆಳೆಯುವ ಈ ಬೀಚ್‌ಗ ವಿದೇಶಿಗರು ಸೇರಿ ಸಾಕಷ್ಟು ಮಂದಿ ಭೇಟಿ ನೀ...