Bengaluru, ಮಾರ್ಚ್ 22 -- Officer on Duty Review: ಆಫೀಸರ್‌ ಆನ್‌ ಡ್ಯೂಟಿ.. ಪ್ರಸ್ತುತತೆಗೆ ಪೂರಕ ಎನಿಸುವ ಗಟ್ಟಿ ಕಂಟೆಂಟ್‌ನ ಮಲಯಾಳಿ ಸಿನಿಮಾ. ಮೇಲ್ನೋಟಕ್ಕೆ ಇದೊಂದು ಸೇಡಿನ ಕಥೆಯಾದರೂ, ಸಿನಿಮಾ ಶುರುವಾಗಿ ಒಂದೊಂದೆ ಪದರಗಳು ಬಿಚ್ಚಿಕೊಳ್ಳುತ್ತ ಹೋದಂತೆ, ಅಲ್ಲಿ ಪ್ರೀತಿ ಹೆಸರಿನಲ್ಲಿನ ಲೈಂಗಿಕ ದೌರ್ಜನ್ಯ, ಮಾದಕ ವ್ಯಸನದ ಜಾಲವೇ ಅನಾವರಣವಾಗುತ್ತದೆ. ಬಗೆದಷ್ಟು ಆಳಕ್ಕೆ ಇಳಿಯುವ ಕಥೆಯಲ್ಲಿ, ಪ್ರೇಕ್ಷಕ ಬಯಸುವ ರೋಚಕತೆಯೂ ಸೀಟಿನ ತುದಿಗೆ ಬಂದು ಕೂರುತ್ತದೆ. ಈ ಮೂಲಕ ಚೊಚ್ಚಲ ಚಿತ್ರದಲ್ಲಿಯೇ ನಿರ್ದೇಶಕ ಜೀತು ಅಶ್ರಫ್‌ ಗೆಲುವಿನ ನಗೆ ಬೀರಿದ್ದಾರೆ.

ಹರಿಶಂಕರ್ (ಕುಂಚಾಕೋ ಬೋಬನ್) ತನ್ನ ನಡವಳಿಕೆಯಿಂದಾಗಿ ಡಿವೈಎಸ್‌ಪಿ ಹುದ್ದೆಯಿಂದ ಸಿಐಗೆ ಹಿಂಬಡ್ತಿ ಪಡೆಯುತ್ತಾನೆ. ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿ ಅಧಿಕಾರ ವಹಿಸಿಕೊಂಡ ಬಳಿಕ, ನಕಲಿ ಚಿನ್ನದ ಕೇಸ್‌ವೊಂದು ಹರಿಶಂಕರ್‌ ಕೈಗೆ ಬರುತ್ತದೆ. ಅದರ ಜಾಡು ಹಿಡಿದು ತನಿಖೆ ಆರಂಭಿಸಿದ ಹರಿಶಂಕರ್‌ಗೆ ಒಂದೊಂದೆ ಸತ್ಯಗಳು ಅರಿವಿಗೆ ಬರುತ್ತ ಹೋಗುತ್ತವೆ. ಸರಣಿ ಆತ್ಮಹತ್ಯೆಗಳಿ...