Bengaluru, ಫೆಬ್ರವರಿ 4 -- ದಿನಕ್ಕೆ 8 ರಿಂದ 9 ಗಂಟೆ ಕಾಲ ಆಫೀಸ್‌ನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಿ ಮನೆಗೆ ಬಂದರೆ, ಬೆನ್ನು ನೋವು, ಕೈ-ಕಾಲು ನೋವು, ಸ್ನಾಯು ಸೆಳೆತ ಮುಂತಾದ ಸಮಸ್ಯೆಗಳು ನಮ್ಮನ್ನು ಬಾಧಿಸುತ್ತವೆ. ಕೆಲಸದ ಒತ್ತಡ ಮತ್ತು ರೀತಿಯಿಂದಾಗಿ ಹಾಗೆ ಕುಳಿತುಕೊಳ್ಳುವುದು ಅನಿವಾರ್ಯ. ಕಂಪ್ಯೂಟರ್, ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡಲಾರಂಭಿಸಿದರೆ, ಸ್ನಾಯುಗಳು ಬಿಗಿಯಾಗಿ, ದೈಹಿಕ ಒತ್ತಡ ಉಂಟಾಗುತ್ತದೆ. ಆ ಸಂದರ್ಭದಲ್ಲಿ ಕೈ-ಕಾಲು ಆಡಿಸಿ, ಮೈಯನ್ನು ಹಿಗ್ಗಿಸಿ, ಅರೆಕ್ಷಣ ಲಟಿಕೆ ಮುರಿದರೆ ಬಿಗಿಯಾಗಿರುವ ಸ್ನಾಯುಗಳು ಸಡಿಲವಾಗಿ, ದೇಹಕ್ಕೆ ತುಸು ಆರಾಮವಾಗುತ್ತದೆ. ಮನಸ್ಸು ಕೂಡ ಒತ್ತಡದಿಂದ ಮುಕ್ತವಾಗುತ್ತದೆ.

ಎಂಟು ಗಂಟೆಗೂ ಅಧಿಕ ಕಾಲ ಕುಳಿತುಕೊಂಡೇ ಕೆಲಸ ಮಾಡಿದರೆ, ದೇಹದ ಸ್ನಾಯುಗಳು ಬಿಗಿಯಾಗಿ, ಬೆನ್ನು ನೋವು, ಭುಜಗಳು ಮತ್ತು ಕೈ ಕಾಲಿನಲ್ಲಿ ಸೆಳೆತ ಉಂಟಾಗುತ್ತದೆ. ಆದರೆ ಅದೇ ಸ್ಥಿತಿಯಲ್ಲಿ ಕುಳಿತುಕೊಂಡಿದ್ದರೆ, ದೇಹಕ್ಕೆ ಅಪಾಯವಿದೆ. ಅದಕ್ಕಾಗಿ ನಾವು ಕುರ್ಚಿಯಲ್ಲಿ ಕುಳಿತುಕೊಂಡೇ, ಕೆಲ...