ಭಾರತ, ಏಪ್ರಿಲ್ 15 -- SK Shyam Sundar Passed Away:ಡಿಜಿಟಲ್ ಜರ್ನಲಿಸಂ ಇವತ್ತಿಗೆ ಯಾರಿಗಾದರೂ ಅರ್ಥ ಮಾಡಿಸಬೇಕು ಅಂದರೆ ಬಲು ಸಲೀಸು. ಆದರೆ ಅದನ್ನು ಅದ್ಯಾವುದೋ ಹೊಸ ತರಕಾರಿಯೋ ಹಣ್ಣೋ ಮನೆ ಗುಡಿಸುವ ಪೊರಕೆನೋ ಎಂಬಂತೆ ನೋಡುತ್ತಿದ್ದ ಕಾಲದಲ್ಲಿಯೇ ಅದರ ಪಾಕವನ್ನು ಕನ್ನಡದಲ್ಲಿ ಸಿದ್ಧಪಡಿಸಿ ಜನರಿಗೆ ರುಚಿ ಹತ್ತಿಸಿದವರು ಎಸ್.ಕೆ.ಶ್ಯಾಮ್ ಸುಂದರ್. ಇದಕ್ಕಿಂತ 'ಶಾಮಿ' ಅಂದರೆ ಹೆಚ್ಚು ಜನರಿಗೆ, ಅದರಲ್ಲೂ ಪತ್ರಕರ್ತರಿಗೆ ಬೇಗ ಗೊತ್ತಾಗುತ್ತದೆ. ಅಂಥ ಶಾಮಿ 'ಸೈನ್ ಆಫ್' ಮಾಡಿದ್ದಾರೆ. ಶಾಮ ಸುಂದರ್ ಅವರು ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಇದ್ದರು. ಶಂಕರ್ ನಾಗ್ ಸರ್ಕಲ್ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಅವಿವಾಹಿತರಾಗಿದ್ದ ಶ್ಯಾಮ್ ಏಪ್ರಿಲ್ 14ನೇ ತಾರೀಕು ಸೋಮವಾರ ನಿಧನರಾಗಿದ್ದಾರೆ. ಅವರು ಮೂಲತಃ ಚಿತ್ರದುರ್ಗದವರು. 72 ವರ್ಷದ ಶಾಮಣ್ಣನಿಗೆ ಪತ್ರಿಕೋದ್ಯಮದಲ್ಲಿಯೇ 39 ವರ್ಷಗಳಿಗೂ ಅಧಿಕ ಅನುಭವವಿತ್ತು.

ದಟ್ಸ್ ಕನ್ನಡ ಎಂಬ ವೆಬ್ ಸೈಟ್ ಇವತ್ತಿಗೆ ಒನ್ ಇಂಡಿಯಾ ಕನ್ನಡ ಅಂತಾಗಿದೆ. ...