ಭಾರತ, ಮಾರ್ಚ್ 12 -- How To Quit Smoking: ವರ್ಷದಿಂದ ವರ್ಷಕ್ಕೆ ಧೂಮಪಾನ ವ್ಯಸನಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಧೂಮಪಾನದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಈ ಅಭ್ಯಾಸವು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಅದರಿಂದಾಗುವ ಹಾನಿಯ ಬಗ್ಗೆ ತಿಳಿದಿದ್ದರೂ, ಕೆಲವರಿಗೆ ಈ ದುಶ್ಚಟವನ್ನು ಬಿಡಲು ಸಾಧ್ಯವಾಗುವುದಿಲ್ಲ. ಸಿಗರೇಟ್ ಬಿಡುವುದು ಅಥವಾ ಕಡಿಮೆ ಮಾಡುವುದು ಕಷ್ಟದ ಕೆಲಸ, ಆದರೆ ಅಸಾಧ್ಯ ಖಂಡಿತ ಅಲ್ಲ.

ಧೂಮಪಾನದ ಅಪಾಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ ತಿಂಗಳ ಎರಡನೇ ಬುಧವಾರವನ್ನು ಧೂಮಪಾನ ನಿಷೇಧ ದಿನ ಎಂದು ಆಚರಿಸಲಾಗುತ್ತದೆ. ಧೂಮಪಾನ ಬಿಡಲು ಬಯಸುವವರಿಗೆ ಸಹಾಯ ಮಾಡಲು ಈ ದಿನವನ್ನು ಆರೋಗ್ಯ ಜಾಗೃತಿ ದಿನವೆಂದು ಆಚರಿಸಲಾಗುತ್ತದೆ. ಧೂಮಪಾನ ನಿಷೇಧ ದಿನವಾಗಿರುವ ಇಂದು ಧೂಮಪಾನ ಬಿಡಲು ಸಹಾಯ ಮಾಡುವ ಕೆಲವು ಟಿಪ್ಸ್‌ಗಳು ನಿಮಗಾಗಿ.

ನೀವು ಧೂಮಪಾನ ಬಿಡಲು ಬಯಸಿದರೆ, ಮೊದಲು ಏಕೆ ಬಿಡಲು ಬಯಸುತ್ತೀರಿ ಎಂಬುದರ ಕುರಿತು ಚೆನ್ನಾಗಿ...