Bengaluru, ಮಾರ್ಚ್ 2 -- Ninety One XE: ಪೆಟ್ರೋಲ್ ದರ ಒಂದೆಡೆ ಏರಿಕೆಯಾಗಿದೆ, ಮತ್ತೊಂದೆಡೆ ಪ್ರೀಮಿಯಂ ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ದರದಲ್ಲೂ ಏರಿಕೆಯಾಗಿದೆ. ಹೀಗಾಗಿ ಜನಸಾಮಾನ್ಯರು ಬಸ್, ಮೆಟ್ರೋಗಳಲ್ಲಿ ಪ್ರಯಾಣ ಮಾಡೋಣವೆಂದರೆ ಅಲ್ಲೂ ಬೆಲೆ ಏರಿಕೆಯ ಬಿಸಿ ಇದೆ. ಹೀಗಾಗಿ ಮನೆಯ ಸುತ್ತಮುತ್ತ, ಮಾರ್ಕೆಟ್, ಅಂಗಡಿಗೆ ಹೋಗಿ ಬರಲು ಸಣ್ಣ ಪುಟ್ಟ ಅಗತ್ಯಗಳಿವೆ ಬೇಕಾಗಿರುವ ಸ್ಕೂಟರ್‌ ಒಂದನ್ನು ನೀವು ನೋಡುತ್ತಿದ್ದರೆ, ಇಲ್ಲೊಂದು ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಇದೆ, ನೈಂಟಿ ಒನ್ ಎಕ್ಸ್ ಎಂಬ ಸ್ಕೂಟರ್ ಪ್ರತಿ ಕಿ.ಮೀ.ಗೆ 15 ಪೈಸೆ ದರದಲ್ಲಿ ಚಲಿಸುತ್ತದೆ ಮತ್ತು ಇದರ ಬೆಲೆ ರೂ. 30,000 ಕ್ಕಿಂತ ಕಡಿಮೆ ಇದೆ. ಅಲ್ಲದೆ 80 ಕಿ.ಮೀ ವ್ಯಾಪ್ತಿ ಮತ್ತು 25 ಕಿ.ಮೀ.ಯ ಸೀಮಿತ ವೇಗವನ್ನು ಹೊಂದಿರುವುದಲ್ಲದೆ, ಕೈಗೆಟುಕುವ ದರದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಹೀಗಾಗಿ ಸೀಮಿತ ಆಯ್ಕೆಗಳ ಬಳಕೆ ನಿಮ್ಮದಾಗಿದ್ದರೆ, ಈ ಸ್ಕೂಟರ್ ಜೇಬಿಗೂ ಹಿತ, ಮಾಲಿನ್ಯವೂ ಇರುವುದಿಲ್ಲ.

ನೈಂಟಿ ಒನ್ ಎಕ್ಸ್ ಹೊಸ ಸರಣಿಯಲ್ಲಿ ಇತ್ತೀಚೆಗೆ ಬಿಡುಗಡ...