ಭಾರತ, ಮಾರ್ಚ್ 9 -- ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕ ಕ್ರೇಜ್ ಹುಟ್ಟು ಹಾಕಿದ್ದ ಮಂಗಳೂರು ಮೂಲದ ನಟಿ ನಿಮಿಕಾ ರತ್ನಾಕರ್, ಇದೀಗ ಹೊಸ ಸಿನಿಮಾವೊಂದರ ತಯಾರಿಯಲ್ಲಿದ್ದಾರೆ. ಆ ಚಿತ್ರಕ್ಕೆ 'ವೈಲ್ಡ್ ಟೈಗರ್ ಸಫಾರಿ' ಎಂಬ ಶೀರ್ಷಿಕೆ ಇಡಲಾಗಿದೆ.

'ವೈಲ್ಡ್ ಟೈಗರ್ ಸಫಾರಿ' ಚಿತ್ರವನ್ನು ಚಂದ್ರಮೌಳಿ ನಿರ್ದೇಶನ ಮಾಡಲಿದ್ದಾರೆ. ಕೆಜಿಎಫ್ ಸರಣಿಯ ರೈಟರ್ ಆಗಿ ಗಮನ ಸೆಳೆದಿದ್ದವರು ಚಂದ್ರಮೌಳಿ.

ಈ 'ವೈಲ್ಡ್ ಟೈಗರ್ ಸಫಾರಿ' ಸಿನಿಮಾದ ಕಲಾ ನಿರ್ದೇಶನದ ಜವಾಬ್ದಾರಿಯನ್ನು ಶಿವಕುಮಾರ್ ಹೊತ್ತಿದ್ದಾರೆ. ಇವರೂ ಕೂಡಾ ಕೆಜಿಎಫ್ ಸರಣಿಯ ಕಲಾ ನಿರ್ದೇಶಕರಾಗಿದ್ದವರು. ಇನ್ನುಳಿದಂತೆ ಎ.ಜೆ ಶೆಟ್ಟಿ ಛಾಯಾಗ್ರಹಣ ಮಾಡಲಿದ್ದಾರೆ.

'ವೈಲ್ಡ್ ಟೈಗರ್ ಸಫಾರಿ' ಸಿನಿಮಾ ಮೂಲಕ ಶಿಥಿಲ್ ಪೂಜಾರಿ ನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಬಾಲಿವುಡ್‌ನಲ್ಲಿ ಹೆಸರುವಾಸಿಯಾಗಿರುವ ಡ್ಯಾನ್ಸರ್ ಧರ್ಮೇಶ್ ಹಾಗೂ ಸುಶಾಂತ್ ಪೂಜಾರಿ ಈ ಚಿತ್ರದಲ್ಲಿ ಬಹುಮುಖ್ಯವಾದ ಪಾತ್ರಗಳಲ್ಲಿ ನಟಿಸಲಿದ್ದಾರೆ. ನಿಮಿಕಾ ರತ್ನಾಕರ್ ಚೆಂದದ ಪಾತ್ರವೊಂದರ ಮೂ...