ಭಾರತ, ಫೆಬ್ರವರಿ 4 -- ಆರೋಗ್ಯವೇ ಭಾಗ್ಯ ಎಂಬುದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಿಲ್ಲಿ ಅಮೂಲ್ಯವಾದ ಮಹತ್ವವನ್ನು ಒತ್ತಿಹೇಳುವ ಒಂದು ಗಾದೆ. ಆದರೆ, ಇಂದಿನ ಬದಲಾದ ಜೀವನಶೈಲಿ ಹಾಗೂ ಆಹಾರಪದ್ಧತಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ನಾವು ಮಾಡುವ ಪ್ರಯತ್ನಗಳೆಷ್ಟು? ಬದಲಾಗುತ್ತಿರುವ ಹವಾಮಾನದೊಂದಿಗೆ ನಾವು ಸೇವಿಸುವ ಆಹಾರದ ಪದ್ಧತಿಯು ಕೈಗಾರಿಕರಣಗೊಂಡಿವೆ. ಹೀಗಾಗಿ ಬಹುತೇಕ ಮಂದಿಯನ್ನು ಸ್ಥೂಲಕಾಯ ಸಮಸ್ಯೆ ಕಾಡುತ್ತಿದೆ. ತೂಕ ಇಳಿಕೆ, ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಈ ಡಯಟ್‌ ಅನ್ನು ತಪ್ಪದೇ ಪಾಲಿಸಿ.

ದೈನಂದಿನ ಜೀವನದಲ್ಲಿ ವಾಕಿಂಗ್, ಜಾಗಿಂಗ್, ಸ್ವಿಮ್ಮಿಂಗ್ ಹೀಗೆ ಎಲ್ಲಾ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರೂ ಊಟದ ವಿಚಾರಕ್ಕೆ ಬಂದಾಗ ಬಹುತೇಕರು ಇದನ್ನು ಕಡೆಗಣಿಸುವುದೇ ಹೆಚ್ಚು. ದೈಹಿಕ ಶ್ರಮದೊಂದಿಗೆ ಆಹಾರ ಪದ್ಧತಿ ಸರಿಯಾಗಿದ್ದಾಗ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆ ಮಾ...