Bangalore, ಮಾರ್ಚ್ 21 -- Night Road Movie OTT: ನಟ ಧರ್ಮ, ಕಿನ್ನಾರಿ ಖ್ಯಾತಿಯ ಜ್ಯೋತಿ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ನೈಟ್‌ ರೋಡ್‌ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಗೋಪಾಲ್ ಹಳೆಪಾಳ್ಯ ನಿರ್ದೇಶನದ ಈ ಸಿನಿಮಾದಲ್ಲಿ ಧರ್ಮ ಪೊಲೀಸ್‌ ಅಧಿಕಾರಿಯಾಗಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಜ್ಯೋತಿ ರೈ, ಗಿರಿಜಾ ಲೋಕೇಶ್ ಗೋವಿಂದೇಗೌಡ, ರವಿಕಿಶೋರ್, ಮಂಜು ರಂಗಾಯಣ, ಪ್ರಭು, ಸಚ್ಚಿ,ಮಂಜು ಕೃಷ್, ರೇಣು ಶಿಕಾರಿ, ಸುನೇತ್ರ, ಚಂದ್ರ ಮೂರ್ತಿ ಮುಂತಾದವರು ಈ ನೈಟ್‌ ರೋಡ್‌ ಸಿನಿಮಾದಲ್ಲಿ ನಟಿಸಿದ್ದಾರೆ.

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ನೈಟ್‌ ರೋಡ್‌ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದ ಒಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಮ್‌ ವಿಡಿಯೋ ಕೆಲವು ತಿಂಗಳ ಹಿಂದೆಯೇ ಪಡೆದಿರುವುದಾಗಿ ವರದಿಯಾಗಿತ್ತು. ಕಳೆದ ವರ್ಷ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಒಟಿಟಿಯಲ್ಲಿ ರಿಲೀಸ್‌ ಆಗುವ ನಿರೀಕ್ಷೆಯಿತ್ತು. ಆದರೆ, ತಡವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಕನ್ನಡದ ಕೆಲವು...