Bangalore, ಮಾರ್ಚ್ 14 -- Latest OTT Movie Release: ಬಾಲಿವುಡ್‌ನ ಎಮರ್ಜೆನ್ಸಿ ಸಿನಿಮಾ ಕೊನೆಗೂ ನೆಟ್‌ಫ್ಲಿಕ್ಸ್‌ಗೆ ಆಗಮಿಸಿದೆ.ಈ ಸಿನಿಮಾದಲ್ಲಿ ಕಂಗನಾ ರಣಾವತ್‌ ಅವರು ತುರ್ತು ಪರಿಸ್ಥಿತಿ ಕಾಲದ ಪ್ರಧಾನಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಚ್‌ 14ರಂದು ಬಿಡುಗಡೆಯಾಗಲಿದೆ ಎಂದು ಕಂಗನಾ ರಣಾವತ್‌ ತಿಳಿಸಿದ್ದರು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ಇದೀಗ ಅಭಿಮಾನಿಗಳಿಗೆ ಹೋಳಿ ಹಬ್ಬದ ಉಡುಗೊರೆಯಾಗಿ ಎಮರ್ಜೆನ್ಸಿ ಸಿನಿಮಾವನ್ನು ಒಟಿಟಿಯಲ್ಲಿ ಕಂಗನಾ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ಸಿನಿಮಾ ಹಿಂದಿಯಲ್ಲಿ ಮಾತ್ರ ಸ್ಟ್ರೀಮಿಂಗ್‌ ಆಗುತ್ತಿದೆ. ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಿಲ್ಲ.

ಇದು ಪ್ರಧಾನಿ ಇಂದಿರಾ ಗಾಂಧಿ ಬಯೋಪಿಕ್‌. ಕಂಗನಾ ರಣಾವತ್‌ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದರೆ, ಅನುಪಮ್‌ ಖೇರ್‌, ಶ್ರೇಯಸ್‌ ತಲಪಾಡೆ, ಮಹಿಮಾ ಚೌಧರಿ, ಮಿಲಿಂದ್‌ ಸೋಮನ್‌, ಸತೀಶ್‌ ಕೌಶಿಕ್‌ ಮುಂತಾದವರು ಪ್ರಮು...