ಭಾರತ, ಮಾರ್ಚ್ 27 -- New OTT Release This Week: ದಕ್ಷಿಣ ಭಾರತದ ಸಿನಿಮಾಗಳನ್ನು ನೋಡಲು ದೇಶ ವಿದೇಶಗಳ ಒಟಿಟಿ ವೀಕ್ಷಕರು ಕಾಯುತ್ತಿರುತ್ತಾರೆ. ಈ ವಾರ ಅಂದರೆ ಮಾರ್ಚ್‌ 23ರಿಂದ ಮಾರ್ಚ್‌ 30ರ ತನಕ ಹಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಈ ವಾರ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಜೀ5, ಜಿಯೋಹಾಟ್‌ಸ್ಟಾರ್‌ ಇತ್ಯಾದಿ ಒಟಿಟಿಗಳಲ್ಲಿ ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳು ಬಿಡುಗಡೆಯಾಗಲಿವೆ. ಮಝಾಕ, ಯುಐ, ಅನ್ಪೋಡಿ ಕಣ್ಮಣಿ ಸೇರಿದಂತೆ ಈ ವಾರದ ಒಟಿಟಿ ಸಿನಿಮಾಗಳ ವಿವರ ಇಲ್ಲಿದೆ.

ಈ ಮಲಯಾಳಂ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ವರ್ಷ ಬಿಡುಗಡೆಯಾಗುತ್ತಿರುವ ಅರ್ಜುನ್ ಅಶೋಕನ್ ಅವರ ಮೂರನೇ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಅನಘಾ ನಾರಾಯಣನ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಮಾರ್ಚ್‌ 26ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಜೀ5 ಒಟಿಟಿಯಲ್ಲಿ ಮಝಾಕ ಎಂಬ ತೆಲುಗು ಸಿನಿಮಾ ಬಿಡುಗಡೆಯಾಗಲಿದೆ. ಇದು ಮಾರ್ಚ್‌ 28ರಂದು ಬಿಡುಗಡೆಯಾಗಲಿದೆ. ಇದು ಸಂ...