ಭಾರತ, ಮಾರ್ಚ್ 12 -- ಒಟಿಟಿ ದೈತ್ಯ 'ನೆಟ್‌ಫ್ಲಿಕ್ಸ್'ನಲ್ಲಿ ಈ ವಾರ ಅನೇಕ ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗಲಿವೆ. ಕ್ರೈಂ, ಥ್ರಿಲ್ಲರ್‌, ರೊಮ್ಯಾಂಟಿಕ್ ಹೀಗೆ ವಿವಿಧ ಜಾನರ್‌ನ ಸಿನಿಮಾ, ಸರಣಿಗಳು ಲಭ್ಯವಿವೆ. ಇಲ್ಲಿ ಯಾವೆಲ್ಲಾ ಸಿನಿಮಾ, ವೆಬ್‌ಸರಣಿ ಬಿಡುಗಡೆಯಾಗಲಿವೆ ಎಂಬ ಪಟ್ಟಿ ಇದೆ. ಇದರಲ್ಲಿ ನಿಮಗಿಷ್ಟವಾಗಿದ್ದನ್ನು ಆಯ್ಕೆ ಮಾಡಿಕೊಂಡು, ನೋಡಿ ವೀಕೆಂಡ್‌, ಹೋಳಿ ರಜಾ ದಿನಗಳನ್ನು ಎಂಜಾಯ್ ಮಾಡಿ.

ಅಮೆರಿಕನ್ ಮ್ಯಾನ್‌ಹಂಟ್ - ಒಸಾಮಾ ಬಿನ್ ಲಾಡೆನ್ಒಸಾಮಾ ಬಿನ್ ಲಾಡೆನ್ ಹೆಸರು ಕೇಳಿದ್ರೆ ಎದೆ ನಡುಗುತ್ತೆ. ಈ ಹೆಸರು ಇನ್ನೂ ಅನೇಕರಿಗೆ ಭಯ ಹುಟ್ಟಿಸುತ್ತದೆ . ಮಾರ್ಚ್ 10 ರಂದು 'ಅಮೆರಿಕನ್ ಮ್ಯಾನ್‌ಹಂಟ್: ಒಸಾಮಾ ಬಿನ್ ಲಾಡೆನ್' ಎಂಬ ರೋಮಾಂಚಕಾರಿ ಸಾಕ್ಷ್ಯಚಿತ್ರವು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ನೀವು ಸಾಕ್ಷ್ಯಚಿತ್ರಗಳ ಅಭಿಮಾನಿಯಾಗಿದ್ದರೆ ಇದನ್ನು ನೀವು ತಪ್ಪದೇ ನೋಡಬೇಕು.

ಟೆಂಪ್ಟೇಶನ್ ಐಲ್ಯಾಂಡ್‌ (Temptation Island)ನೀವು ರಿಯಾಲಿಟಿ ಶೋಗಳನ್ನು ನೋಡ...