ಭಾರತ, ಏಪ್ರಿಲ್ 1 -- ಈ ವಾರ 7 ಸಿನಿಮಾ, ವೆಬ್‌ಸರಣಿಗಳು ಬಿಡುಗಡೆ: ಏಪ್ರಿಲ್ ತಿಂಗಳ ಮೊದಲ ವಾರ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಹಲವು ಹೊಸ ಸಿನಿಮಾ ಹಾಗೂ ವೆಬ್‌ ಸರಣಿಗಳು ಬಿಡುಗಡೆಯಾಗಲಿವೆ. ಒಂದಕ್ಕಿಂತ ಒಂದು ವಿಭಿನ್ನ ಕಥಾಹಂದರ ಹೊಂದಿರುವ ಇವುಗಳಲ್ಲಿ ಹಾರರ್‌, ಕಾಮಿಡಿ, ಸಸ್ಪೆನ್ಸ್ ಎಲ್ಲವೂ ಇದೆ. ಈ ವಾರ ಬಿಡುಗಡೆಯಾಗಲಿರುವ ಸಿನಿಮಾ, ವೆಬ್‌ಸರಣಿಗಳ ಪಟ್ಟಿ ಇಲ್ಲಿದೆ.

ಟೆಸ್ಟ್‌ಎಸ್‌.ಶಶಿಕಾಂತ್ ನಿರ್ದೇಶನದ ಆರ್. ಮಾಧವನ್‌, ನಯನತಾರಾ, ಸಿದ್ಧಾರ್ಥ್‌, ಮೀರಾ ಜಾಸ್ಮಿನ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 4ರಂದು ಬಿಡುಗಡೆಯಾಗಲಿದೆ. ಈ ಕಥೆಯು ಐತಿಹಾಸಿಕ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಭೇಟಿಯಾಗುವ ಮೂವರು ಸಾಮಾನ್ಯ ಜನರ ಕಥೆಯನ್ನು ಹೊಂದಿದೆ.

ಕರ್ಮ್‌: ಸಸ್ಪೆನ್ಸ್ ಕಥಾಹಂದರ ಹೊಂದಿರುವ ಕರ್ಮ್‌ ವೆಬ್ ಸರಣಿಯು ಏಪ್ರಿಲ್ 4ರಂದು ಬಿಡುಗಡೆಯಾಗಲಿದೆ. 6 ಪಾತ್ರಗಳನ್ನು ಹೊಂದಿರುವ ಈ ಸರಣಿಯು ಕ್ಷಣ ಕ್ಷಣಕ್ಕೂ ನಿಮ್ಮನ್ನು ಕುತೂಹಲ ಹೆಚ್ಚುವಂತೆ ಮಾಡುತ್ತ...