Bengaluru, ಏಪ್ರಿಲ್ 16 -- ನೆಟ್‌ಫ್ಲಿಕ್ಸ್‌ನಲ್ಲಿ ಸಾಲು ಸಾಲು ಸಿನಿಮಾಗಳು ಸ್ಟ್ರೀಮಿಂಗ್‌ ಆಗುತ್ತಿವೆ. ಆ ಪೈಕಿ ಪ್ರಸ್ತುತ ಯಾವೆಲ್ಲ ಸಿನಿಮಾಗಳು ಟಾಪ್‌ ಟ್ರೆಂಡಿಂಗ್‌ನಲ್ಲಿವೆ, ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಕೋರ್ಟ್‌; ಸ್ಟೇಟ್‌ ವರ್ಸಸ್‌ ಅ ನೋಬಡಿ: ​ಟಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಈ ಕೋರ್ಟ್‌ ರೂಮ್‌ ಡ್ರಾಮಾ ಸಿನಿಮಾವನ್ನು ರಾಮ್ ಜಗದೀಶ್ ನಿರ್ದೇಶನ ಮಾಡಿದ್ದಾರೆ. ಮಾರ್ಚ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸದ್ಯ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ನಂಬರ್‌ 1 ಟ್ರೆಂಡಿಂಗ್‌ನಲ್ಲಿದೆ. ಕನ್ನಡದಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಛಾವಾ: ಇದೇ ವರ್ಷದ ಫೆಬ್ರವರಿ 14ರಂದು ತೆರೆಗೆ ಬಂದಿದ್ದ ಮರಾಠಾ ದೊರೆ ಸಂಭಾಜಿ ಮಹಾರಾಜ್‌ ಜೀವನ ಆಧರಿತ ಸಿನಿಮಾ ಈ ಛಾವಾ. ವಿಕ್ಕಿ ಕೌಶಲ್‌, ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು ಎರಡನೇ ಸ್ಥಾನದಲ್ಲಿದೆ.

ಪೆರುಸು: ತಮಿಳು ಬ್ಲ್ಯಾಕ್ ಕಾಮಿಡಿ ಸಿನಿಮಾ ಈ ಪೆರುಸು....