Bangalore, ಮಾರ್ಚ್ 14 -- Netflix Movie Test: ನೆಟ್‌ಫ್ಲಿಕ್ಸ್‌ ಒಟಿಟಿ ತಾಣವು ಟೆಸ್ಟ್‌ ಸಿನಿಮಾದಲ್ಲಿ ಜನಪ್ರಿಯ ನಾಯಕಿ ನಯನತಾರಾ ಪಾತ್ರ ಏನಿರಲಿದೆ ಎಂದು ಪಾತ್ರ ಪರಿಚಯದ ಟೀಸರ್‌ ಬಿಡುಗಡೆ ಮಾಡಿದೆ. ಸಿದ್ಧಾರ್ಥ್‌, ಮಾಧವನ್‌ ನಟನೆಯ ಈ ಸಿನಿಮಾದಲ್ಲಿ ಒಂದು ಸಣ್ಣ ಮನೆ, ಗಂಡನ ಅಪ್ಪುಗೆ ಮತ್ತು ‌ಅಮ್ಮ ಅನ್ನುವ ಮಗುವಿನ ಕನಸಿನಲ್ಲಿರುವ ಸಾಧಾರಣ ಗೃಹಿಣಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಟೀಸರ್‌ನಲ್ಲಿ ಒಂದಿಷ್ಟು ಭಾವುಕ ಅಂಶಗಳು ಇವೆ.

ಈ ಟೀಸರ್‌ನಲ್ಲಿ ಮಾಧವನ್‌ ಪಾತ್ರಧಾರಿಯ ಪತ್ನಿಯಾಗಿ ಕುಮುದಾ (ನಯನತಾರಾ ) ಇದ್ದಾರೆ. ಆಕೆ ದೇವರಲ್ಲಿ ಬೇಡಿಕೊಳ್ಳುವುದಿಷ್ಟೇ. "ನನ್ನ ಪ್ರಾರ್ಥನೆ, ಕನಸು ಒಂದೇ, ಒಂದು ಸಣ್ಣ ಮನೆ, ಪತಿಯ ಅಪ್ಪುಗೆ ಮತ್ತು ನನ್ನನ್ನು ಅಮ್ಮಾ ಎಂದು ಕರೆಯುವ ಒಂದು ಮಗು". ಆದರೆ, ಈಕೆಗೆ ಮಗುವಾಗುವ ಕನಸು ಈಡೇರುತ್ತಿಲ್ಲ. ಈಕೆ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಾಳೆ. "ನೀನು ಶಾಲೆಯ ಮಕ್ಕಳನ್ನು ನಿನ್ನ ಮಕ್ಕಳಂತೆ ನೋಡಬೇಡ" ಎಂದು ಪ್ರಿನ್ಸಿಪಾಲ್‌ ಹೇಳುತ್ತಾರೆ. ಈ ಮೂಲಕ ಮಕ್ಕಳಂದರೆ ಈಕೆಗೆ ಇಷ್ಟ ಎಂದು ತೋರ...