Sringeri, ಫೆಬ್ರವರಿ 1 -- Naxal Free Karnataka: ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದ ಅರಣ್ಯದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಕ್ರಿಯರಾಗಿದ್ದ ನಕ್ಸಲರನ್ನು ನಿಯಂತ್ರಿಸುವಲ್ಲಿ ಕರ್ನಾಟಕ ಸರ್ಕಾರ ಯಶಸ್ವಿಯಾಗಿದೆ. ಮೂರು ತಿಂಗಳ ಹಿಂದೆ ನಕ್ಸಲ್‌ ವಿಕ್ರಂಗೌಡ ಹತ್ಯೆ ನಂತರ ಆರು ಮಂದಿ ಶರಣರಾಗಿದ್ದಾರೆ. ಇನ್ನೊಬ್ಬ ಭೂಗತ ನಕ್ಸಲ್ ಕೋಟೆಹೊಂಡ ರವಿ ಶುಕ್ರವಾರ ಪೊಲೀಸರ ಎದುರು ಶರಣಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ನಾಲ್ಕು ಕಿ.ಮಿ ದೂರದಲ್ಲಿರುವ ನೆಮ್ಮಾರು ಗ್ರಾಮದ ಅರಣ್ಯ ಇಲಾಖೆ ಅತಿಥಿಗೃಹದಲ್ಲಿ ಶರಣಾಗಿದ್ದಾನೆ. ಈ ಮೂಲಕ ಕರ್ನಾಟಕ ನಕ್ಸಲ್‌ ಮುಕ್ತ ರಾಜ್ಯವಾಗಿದೆ ಎಂದು ಅಧಿಕೃತವಾಗಿ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಶನಿವಾರ ಬೆಳಿಗ್ಗೆ ಬಿಡುಗಡೆಯಾದ ಹೇಳಿಕೆಯಲ್ಲಿ ಖಚಿತಪಡಿಸಲಾಗಿದೆ.

ಕೊನೆಯ ಭೂಗತ ನಕ್ಸಲ್ ಕೋಟೆಹೊಂಡ ರವಿ ನೆಮ್ಮಾರ್ ಫಾರೆಸ್ಟ್ ಐಬಿಯಲ್ಲಿ (ಶೃಂಗೇರಿಯಿಂದ 4 ಕಿಮೀ) ಶರಣಾಗಿದ್ದಾನೆ ಎಂದು ಘೋಷಿಸಲು ನಮಗೆ ಅತ್ಯಂತ ಸಂತೋಷವಾಗಿದೆ. ಅಲ್ಲಿಂದ ಅವರನ್ನು ಶರಣಾಗತಿ ಪ್ರಕ್ರಿಯೆಗಾಗ...