ಭಾರತ, ಏಪ್ರಿಲ್ 6 -- ಶ್ರೀಲಂಕಾಕ್ಕೆ ಮೂರು ದಿನಗಳ ಪ್ರವಾಸಕ್ಕೆ ಹೋಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭಾನುವಾರ ಏಪ್ರಿಲ್ 6ರಂದು ಭಾರತಕ್ಕೆ ಹಿಂದಿರುಗಿದ್ದಾರೆ. ರಾಮನವಮಿಯ ಈ ದಿನದಂದು ವಿಮಾನದಿಂದ ರಾಮ ಸೇತುವೆ ವೀಕ್ಷಿಸಿದ್ದಾರೆ. ಐತಿಹಾಸಿಕ ರಾಮಸೇತುವಿನ ನೋಟವನ್ನು ವೀಕ್ಷಿಸುವ ಮೂಲಕ ಆಧ್ಯಾತ್ಮಿಕವಾಗಿ ಮಹತ್ವದ ಕ್ಷಣವನ್ನು ಹಂಚಿಕೊಂಡರು. ಅಯೋಧ್ಯೆಯ ರಾಮ ಮಂದಿರದಲ್ಲಿ ಸೂರ್ಯ ತಿಲಕ ಸಮಾರಂಭ ನಡೆಯುತ್ತಿರುವ ಸಮಯದಲ್ಲಿಯೇ ರಾಮಸೇತು ದರ್ಶನವಾದ ಕಾರಣ ಪ್ರಧಾನಿ ಮೋದಿ ಇದನ್ನು "ದೈವಿಕ ಕಾಕತಾಳೀಯ" ಎಂದು ಕರೆದಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲೂ ಬರೆದುಕೊಂಡಿದ್ದಾರೆ. "ಸ್ವಲ್ಪ ಸಮಯದ ಹಿಂದೆ ಶ್ರೀಲಂಕಾದಿಂದ ಹಿಂತಿರುಗುವಾಗ, ರಾಮಸೇತುವಿನ ದರ್ಶನ ಪಡೆಯುವ ಮೂಲಕ ಆಶೀರ್ವಾದ ಲಭ್ಯವಾಯಿತು ದೈವಿಕ ಕಾಕತಾಳೀಯವಾಗಿ, ಅಯೋಧ್ಯೆಯಲ್ಲಿ ಸೂರ್ಯ ತಿಲಕ ನಡೆಯುತ್ತಿರುವ ಸಮಯದಲ್ಲಿಯೇ ಈ ಘಟನೆ ಸಂಭವಿಸಿತು. ಎರಡರ ಆಶೀರ್ವಾದವೂ ಸಿಕ್ಕಿತು" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ; ಬಂಡೀಪುರ ಅರಣ್ಯ ಪ್ರದೇಶದಲ್ಲಿ ರ...