ಭಾರತ, ಏಪ್ರಿಲ್ 9 -- Nanjangud Rathotsava 2025: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೌತಮ ಪಂಚ ಮಹಾ ರಥೋತ್ಸವ ಅದ್ಧೂರಿಯಾಗಿ ನಡೆದಿದೆ. ಇಂದು (ಏಪ್ರಿಲ್ 9, ಬುಧವಾರ) ಬೆಳಿಗಿನ ಜಾವ 5 ರಿಂದ 5.40 ರೊಳಗಿನ ಶುಭ ಮೀನ ಲಗ್ನದಲ್ಲಿ ನಡೆದ ಪಂಚ ಮಹಾರಥೋತ್ಸವ ನಡೆದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದರು.

ಬೆಳಿಗ್ಗೆಯಿಂದಲೇ ನಂಜುಂಡೇಶ್ವರನಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಆ ಬಳಿಕ ಉತ್ಸವ ಮೂರ್ತಿ ಮೂರ್ತಿಗಳ ಮೆರವಣಿಗೆ ನಡೆಯಿತು. ಶ್ರೀಕಂಠೇಶ್ವರಸ್ವಾಮಿ, ಪಾರ್ವತಿ ಅಮ್ಮನವರು, ಗಣೇಶ, ಸುಬ್ರಹ್ಮಣ್ಯಸ್ವಾಮಿ, ಚಂಡೀಕೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಸರ್ವಾಲಂಕೃತ ರಥಗಳಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಗಿಯಿತು. ದೊಡ್ಡ ತೇರಿನಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಜರುಗಿತು. ಈ ವೇಳೆ ಭಕ್ತರು ನಂಜುಂಡೇಶ್ವರನ ತೇರು ಎಳೆದು ತಮ್ಮ ಭಕ್ತಿ ಭಾವವನ್ನು ಅರ್ಪಿಸಿದರು. ಅಂತಿಮವಾಗಿ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾರಥೋತ್ಸವವನ್ನು ಕಣ್ತುಂಬಿಕೊಂಡು ಭಕ್ತರು ...