Nanjanagud, ಫೆಬ್ರವರಿ 27 -- Nanjangud Rathotsav 2025: ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನ ಇತಿಹಾಸ ಪ್ರಸಿದ್ದ ಶ್ರೀಕಂಠೇಶ್ವರ ದೇವಾಲಯದ ಪಂಚಾ ಮಹಾರಥೋತ್ಸವವು 2025ರ ಏಪ್ರಿಲ್ 09 ರಂದು ನಡೆಯಲಿದೆ. ರಥೋತ್ಸವದಲ್ಲಿ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು,ಕೇರಳ ಭಾಗದಿಂದಲೂ ಲಕ್ಷಾಂತರ ಭಕ್ತರು ಭಾಗಿಯಾಗಲಿರುವ ಹಿನ್ನೆಲೆಯಲ್ಲಿ ಸಿದ್ದತೆಗಳನ್ನು ಆರಂಭಿಸಲಾಗುತ್ತಿದೆ. ದೇಗುಲದ ಅಲಂಕಾರದ, ಶ್ರೀಕಂಠೇಶ್ವರ ರಥ ಸ್ವಚ್ಚಗೊಳಿಸುವ, ಇಲ್ಲಿಗೆ ಬರುವ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆ, ಮೈಸೂರು ಜಿಲ್ಲಾಡಳಿತ, ನಂಜನಗೂಡು ತಾಲ್ಲೂಕು ಆಡಳಿತದಿಂದ ಗಮನ ಹರಿಸಲಾಗುತ್ತಿದೆ. ರಥೋತ್ಸವ ಜರುಗಿ ಎರಡು ದಿನಗಳ ಬಳಿಕ ಅಂದರೆ ಏಪ್ರಿಲ್ 11 ರಂದು ತೆಪ್ಪೋತ್ಸವ ನಡೆಯಲಿದ್ದು ಇದಕ್ಕೂ ತಯಾರಿ ಮಾಡಿಕೊಳ್ಳಲಾಗುತ್ತಿದೆ.

Published by HT Digital Content Services with permission from HT Kannada....