Bangalore, ಮಾರ್ಚ್ 6 -- Nandini in UP: ಕರ್ನಾಟಕದ ಸಹಕಾರ ವಲಯದ ಹೆಮ್ಮೆಯ ಉತ್ಪನ್ನವಾದ ನಂದಿನಿ ಇನ್ನು ಮುಂದೆ ಉತ್ತರ ಪ್ರದೇಶದ ಪ್ರಸಿದ್ದ ಪ್ರವಾಸಿ ಸ್ಥಳಗಳಾದ ತಾಜ್‌ಮಹಲ್‌ ಖ್ಯಾತಿಯ ಆಗ್ರಾ, ಕೃಷ್ಣ ನಗರಿ ಮಥುರಾದಲ್ಲೂ ಸಿಗಲಿವೆ. ಈಗಾಗಲೇ ದೆಹಲಿಯಲ್ಲಿ ನಂದಿನಿ ಹಾಲು, ಮೊಸರು ಸೇರಿದಂತೆ ಹಲವು ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿರುವ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ಕೆಎಂಎಫ್‌ ಈಗ ಉತ್ತರ ಪ್ರದೇಶದಲ್ಲೂ ತನ್ನ ಚಟುವಟಿಕೆ ವಿಸ್ತರಿಸಲು ಮುಂದಾಗಿದೆ. ಮುಂದಿನ ವಾರದಿಂದಲೇ ಈ ಭಾಗದಲ್ಲಿ ನಂದಿನಿ ಹಾಲು ಸರಬರಾಜು ಶುರುವಾಗಲಿದೆ. ಇದಲ್ಲದೇ ರಾಜಸ್ಥಾನದಲ್ಲಿಯೂ ನಂದಿನಿ ಸೇವೆಯನ್ನು ವಿಸ್ತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಹೈನೋದ್ಯಮದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಕೆಎಂಎಫ್‌ ರಾಷ್ಟ್ರದಲ್ಲಿಯೇ ಎರಡನೇ ಅತಿ ದೊಡ್ಡ ಹಾಲು ಸಹಕಾರ ಸಂಸ್ಥೆ ಎಂಬ ಹಿರಿಮೆ ಹೊಂದಿದೆ. ಕೆಎಂಎಫ್‌ ಸಂಸ್ಥೆಯು ಸದಸ್ಯ ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ 26 ಲಕ್ಷಕ್ಕೂ ಹೆಚ್ಚಿನ ಹೈನುಗಾರ ರೈತರಿಂದ ಹಾಲನ್ನು ಖರೀದಿಸಿ ಅದ...